ಮುಂಬೈ[ನ.21] ಸ್ಪೀಕರ್‌ ಅಳವಡಿಕೆ ಮಾಡಿ ನೀಲಿ ಚಿತ್ರ ನೋಡುತ್ತಿದ್ದವನನ್ನು ಅಕ್ಕ ಪಕ್ಕದವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿ ಪಶ್ಚಿಮದ ವರ್ಷಾ ಅಪಾರ್ಟಮೆಂಟ್ ನಿವಾಸಿ ಮನೋಜ್ ಗುಪ್ತಾ (29) ಬಂಧಿತ ಆರೋಪಿ. ಈ ಕುರಿತು ಮಾಣಿಕ್‍ಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋರ್ನ್.. ಅಲ್ಲಿ ಓಪನ್ ಆಗದಿದ್ದರೇನು.. ಇಲ್ಲಿ ಆಗ್ತಿದೆ!

ವಸಾಯಿ ಪಶ್ಚಿಮದ ವರ್ಷಾ ಅಪಾರ್ಟ್‍ಮೆಂಟ್‍ನಲ್ಲಿ ಪತ್ನಿ, ಮಕ್ಕಳ ಜೊತೆಗೆ ಮನೋಜ್ ಗುಪ್ತಾ ಅಜ್ಜನ ಮನೆಯಲ್ಲಿ ವಾಸವಾಗಿದ್ದ. ಆದರೆ ಮನೋಜ್ ತನ್ನ ನೆರೆಹೊರೆಯವರ ಜೊತೆಗೆ ಕಳೆದ ಕೆಲವು ತಿಂಗಳಿಂದ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಅದೇ ಅಪಾರ್ಟಮೆಂಟ್‍ನ 30 ವರ್ಷದ ಮಹಿಳೆ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾನೆ. ಮಹಿಳೆಯರಿಗೆ ಸನ್ನೆ ಮಾಡಿ ಕರೆಯುತ್ತಿದ್ದ. 

ಮಧ್ಯರಾತ್ರಿ ವೇಳೆಗೆ ದೊಡ್ಡದಾಗಿ ಸೌಂಡ್ ಇಟ್ಟುಕೊಂಡು ನೀಲಿ ಚಿತ್ರ ನೋಡುತ್ತಿದ್ದ. ಇವನ ಕಾಟ ತಾಳಲಾರದೆ ಅಕ್ಕಪಕ್ಕದವಎಉ ದೂರು ನೀಡಿದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.