ಪೋರ್ನ್.. ಅಲ್ಲಿ ಓಪನ್ ಆಗದಿದ್ದರೇನು.. ಇಲ್ಲಿ ಆಗ್ತಿದೆ!

ಅಶ್ಲೀಲ ವೆಬ್  ತಾಣಗಳು ಬಂದ್ ಆಗಿವೆ ಎಂದು ಹಲವಾರು ಜನ ನೊಂದುಕೊಂಡಿದ್ದರು. ವೈಯಕ್ತಿಕ ಹಕ್ಕುಗಳಿಗೆ ಇದು ಮಾರಕ ಎಂಬ ಆಕ್ರೋಶವೂ ಜಾಲತಾಣದಲ್ಲಿ ಎದುರಾಗಿತ್ತು. ಆದರೆ ಸಂಶೋಧಕರು ಇದಕ್ಕೆಲ್ಲ ಮತ್ತೊಂದು ಪರಿಹಾರ ಹುಡುಕಿಕೊಟ್ಟಿದ್ದಾರೆ. ಅಲ್ಲಿ ಓಪನ್ ಆಗದೆ ಇದ್ದರೆ ಏನಂತೆ..ಇಲ್ಲಿ ಓಪನ್ ಆಗ್ತಿದೆ..! 

Porn site Ban but this Browser Supports dirty way

ನವದೆಹಲಿ(ಅ.28)   827 ಪೋರ್ನ್​ ವೆಬ್​ಸೈಟ್​ಗಳಿಗೆ ಬ್ಯಾನ್ ಪಟ್ಟಿ ನೀಡಲಾಗಿದೆ. ಉತ್ತರಾಖಂಡ್ ಹೈಕೋರ್ಟ್ ಆದೇಶದ ಮೇರೆಗೆ ಅಶ್ಲೀಲತೆ ಹೊಂದಿರುವ 827 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡುವಂತೆ ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಯಾವುದೇ ಅಧಿಕೃತ ಆದೇಶವಿಲ್ಲದೇ ಬ್ಯಾನ್ ಜಾರಿಯಾಗಿತ್ತು.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ 827 ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡಿದ್ದು, ಉಳಿದ 30 ವೆಬ್​ಸೈಟ್​ಗಳಲ್ಲಿ ಯಾವುದೇ ಅಶ್ಲೀಲತೆ ಕಂಡುಬಂದಿಲ್ಲ ಎಂಬ ವಿವರಣೆ ನೀಡಿತ್ತು. ಬಂದ್ ಆದ ನೋವು ಅರಗಿಸಿಕೊಳ್ಳಲಾಗದೆ ಕೆಲವರು ಸಂಶೋಧನೆ ಮಾಡಿ ಫಲ ಕಂಡಿದ್ದಾರೆ!

ಪೋರ್ನ್ ಬ್ಯಾನ್, ಸೋಶಿಯಲ್ ಮೀಡಿಯಾ ರಿಯಾಕ್ಷನ್.. ಅಬ್ಬಬ್ಬಾ!

ಜಾರಿಯಲ್ಲಿದ್ದ ಜನಪ್ರಿಯ ಬ್ರೌಸರ್ ಗಳಲ್ಲಿ ಬ್ಲಾಕ್ ಆಗಿರುವುದು ನಿಜ. ಗೂಗಲ್ ಕ್ರೋಮ್ ಮತ್ತು ಮೋಜಿಲ್ಲಾದಲ್ಲಿ ಆ ಸೈಟ್ ಗಳು ಬಂದ್ ಆಗಿವೆ. ಆದರೆ ಇನ್ನೊಂದು ಬ್ರೌಸರ್ ನಲ್ಲಿ ಸದ್ದಿಲ್ಲದೆ ಓಪನ್ ಆಗ್ತಿದೆ. ಆ ಬ್ರೌಸರ್  ಬಿಟ್ಟು  ಜಾರಿಯಲ್ಲಿರುವ ಇನ್ನೊಂದು ಬ್ರೌಸರ್ ನಲ್ಲಿ  ಯಾವುದೆ ಅಡೆತಡೆ ಇಲ್ಲ ಎಂಬುದು ಸಂಶೋಧಕರ ಮಾತು!

Latest Videos
Follow Us:
Download App:
  • android
  • ios