ಜುಲೈ 4ನೇ ತಾರೀಖು ಶರತ್ ಮಡಿವಾಳ ಹತ್ಯೆಗೊಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಇಡೀ ದಕ್ಷಿಣ ಕನ್ನಡ ಜಿಲ್ಲೆ ತುಂಬ ಹಲವು ಗಲಭೆಗಳು ನಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ಗಳು, ಹೋರಾಟಗಳು ನಡೆದವು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 8ನೇ ತಾರೀಖು ಶರತ್ ಮಡಿವಾಳ ಸಾವಿಗೀಡಾಗಿದ್ದರು.
ಮಂಗಳೂರಿನ ಬಂಟ್ವಾಳದ ಆರ್'ಎಸ್'ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಈ ಹತ್ಯೆಯ ಹಿಂದಿನ ಜಾಡು ಹಿಡಿರುವ ಪೊಲೀಸರಿಗೆ ಸ್ಫೋಟಕ ಸತ್ಯಗಳು ಹೊರಬೀಳುತ್ತಿವೆ. ಹೌದು, ಪೊಲೀಸರ ತನಿಖೆಯ ಪ್ರಕಾರ ಶರತ್ ಹತ್ಯೆಗೆ ಮುಂಬೈ ಲಿಂಕ್ ಇದೆಯಂತೆ.
ಜುಲೈ 4ನೇ ತಾರೀಖು ಶರತ್ ಮಡಿವಾಳ ಹತ್ಯೆಗೊಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಇಡೀ ದಕ್ಷಿಣ ಕನ್ನಡ ಜಿಲ್ಲೆ ತುಂಬ ಹಲವು ಗಲಭೆಗಳು ನಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ಗಳು, ಹೋರಾಟಗಳು ನಡೆದವು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 8ನೇ ತಾರೀಖು ಶರತ್ ಮಡಿವಾಳ ಸಾವಿಗೀಡಾಗಿದ್ದರು.
ಶರತ್ ಸಾವಿನಿಂದ ಶಾಂತವಾಗಬೇಕಾಗಿದ ದಕ್ಷಿಣ ಕನ್ನಡ ಜಿಲ್ಲೆ ಬೂದಿಮುಚ್ಚಿದ ಕೆಂಡದಂತೆ ಇತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪೊಲೀಸರಿಗೆ ಖಡಕ್ ಸೂಚನೆ ನೀಡಿದರು. ಹೀಗಾಗಿ ಪೊಲೀಸರು ತೀವ್ರ ತನಿಖೆ ನಡೆಸಿ ಕೊಲೆ ಹಿಂದಿನ ಸ್ಫೋಟಕ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಮಾಹಿತಿ ಆಧಾರದ ಮೇಲೆ ದಕ್ಷಿಣ ಕನ್ನಡ ಎಸ್ ಪಿ ಸುಧೀರ್ ರೆಡ್ಡಿ ಆರೋಪಿಗಳ ಬಂಧನಕ್ಕಾಗಿ ಈಗಾಗಲ್ಲೇ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ ಮುಂಬೈ ಸುಪಾರಿಗಳಿಂದ ಹತ್ಯೆಗೀಡಾಗಿರುವ ಶರತ್ ಮಡಿವಾಳ ಕೇಸ್‌ನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹತ್ಯೆಗೆ ಸುಪಾರಿ ನೀಡಿದವರು ಯಾರು? ಹತ್ಯೆಯ ಹಿಂದಿನ ಉದ್ದೇಶವೇನು? ಎಂಬುವುರ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
--