Asianet Suvarna News Asianet Suvarna News

ಪ್ರೇಯಸಿ ನೋಡಲು ಅಕ್ರಮವಾಗಿ ಪಾಕ್ ಪ್ರವೇಶಿಸಿದ ಮುಂಬೈ ಟೆಕ್ಕಿ ರಿಲೀಸ್!

ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪ್ರೀತಿಸಿದ್ದ ಹುಡುಗಿಯನ್ನು ಭೇಟಿಯಾಗಲು ಅಕ್ರಮವಾಗಿ ಪಾಕ್‌ಗೆ ಪ್ರವೇಶಿಸಿ 3 ವರ್ಷ ಜೈಲು ಸೇರಿದ್ದ ಭಾರತೀಯ ಅನ್ಸಾರಿ ಕೊನೆಗೂ ಬಿಡುಗಡೆಗೊಂಡಿದ್ದಾನೆ.

Mumbai Engineer Released From Pak Jail Will Return Home Today
Author
New Delhi, First Published Dec 18, 2018, 3:41 PM IST

ಇಸ್ಲಾಮಾಬಾದ್‌[ಡಿ.18]: ಅಂತರ್ಜಾಲದಲ್ಲಿ ಪರಿಚಿತಗೊಂಡಿದ್ದ ತನ್ನ ಪ್ರಿಯತಮೆಯನ್ನು ಭೇಟಿ ಮಾಡಲು ನಕಲಿ ಪಾಸ್‌ಪೋರ್ಟ್‌ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದ ಮುಂಬೈ ಮೂಲ ಹಮೀದ್‌ ನಿಹಾಲ್‌ ಅನ್ಸಾರಿಯನ್ನು ಪಾಕಿಸ್ತಾನ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

3 ವರ್ಷಗಳ ಹಿಂದೆ ಅನ್ಸಾರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆಷ್ಘಾನಿಸ್ತಾನದ ಮೂಲಕ ಪಾಕ್‌ಗೆ ತೆರಳಿದ್ದ. ಆದರೆ ಈತ ಭಾರತೀಯ ಗುಪ್ತಚರ ಎಂದು ಬಂಧಿಸಿ 3 ವರ್ಷ ಜೈಲಿಗೆ ಅಟ್ಟಲಾಗಿತ್ತು. ಇದೀಗ ಶಿಕ್ಷೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕೋರ್ಟ್‌ ಆದೇಶದಂತೆ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.

Follow Us:
Download App:
  • android
  • ios