ಮುಂಬೈನ ಭಕ್ತಿ ವೇದಾಂತ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರಿಗೆ ಸರ್ಜರಿ ನಡೆಸುವ ಮೂಲಕ ಪಿತ್ತಕೋಶದಲ್ಲಿದ್ದ 2350 ಕಲ್ಲುಗಳನ್ನು ತೆಗೆದಿದ್ದಾರೆ.

ಮುಂಬೈ : ಮುಂಬೈನ ಭಕ್ತಿ ವೇದಾಂತ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರಿಗೆ ಸರ್ಜರಿ ನಡೆಸುವ ಮೂಲಕ ಪಿತ್ತಕೋಶದಲ್ಲಿದ್ದ 2350 ಕಲ್ಲುಗಳನ್ನು ತೆಗೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

50 ವರ್ಷದ ಮಹಿಳೆಗೆ ಕಳೆದ 2016ರ ನವೆಂಬರ್ ತಿಂಗಳಿನಿಂದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ವೈದ್ಯರು ಸರ್ಜರಿ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿತ್ತು.

ಈ ನಿಟ್ಟಿನಲ್ಲಿ ಆಕೆ ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಆಕೆಯ ಪಿತ್ತಕೋಶದಿಂದ ಸಾವಿರಾರು ಕಲ್ಲುಗಳನ್ನು ಹೊರತೆಗೆಯಲಾಗಿದೆ.

ವಿಪರೀತವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆ ಯಾವುದೇ ರೀತಿಯಾದ ಚಿಕಿತ್ಸೆ ಪಡೆದುಕೊಂಡರೂ ಕೂಡ ಕಡಿಮೆಯಾಗಿರಲಿಲ್ಲ. ಬಳಿಕ ಚಿಕಿತ್ಸೆ ನಡೆಸಲಾಗಿದ್ದು, ಈ ವೇಳೆ ಆಕೆಯ ಹೊಟ್ಟೆಯಲ್ಲಿದ್ದ ಕಲ್ಲುಗಳನ್ನು ಹೊರಕ್ಕೆ ತೆಗೆಯಲಾಗಿದೆ.