Asianet Suvarna News Asianet Suvarna News

3.4 ಕೋಟಿ ರು. ತಿಂದು ಮುಗಿಸಿದ ಇಲಿಗಳು..!

. 2011ರಲ್ಲಿ ಅಂಧೇರಿಯ ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡ 200 ಕೆ.ಜಿ. ಕೆಟಮೈನ್ ಡ್ರಗ್ಸ್ ಅನ್ನು ಸುಂಕ ಇಲಾಖೆಯ ಉಗ್ರಾಣದಲ್ಲಿ ದಾಸ್ತಾನು ಇಡಲಾಗಿತ್ತು.

Mumbai Cops Claim That Rats Have Eaten 34 Kg Of Narcotic Drugs Worth Rs 3 Crore

ಮುಂಬೈನ ಪೊಲೀಸರ ಸುಂಕ ಇಲಾಖೆ ಉಗ್ರಾಣ ದಿಂದ ೨೦೧೪ರಲ್ಲಿ ೩.೪ ಕೋಟಿ ರು. ಬೆಲೆಯ ಮಾದಕ ದ್ರವ್ಯ ನಾಪತ್ತೆಯಾದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಇದು ಯಾವುದೋ ಕಳ್ಳನ ಕೈಚಳಕ ಎಂದು ನೀವು ನಂಬಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ 34 ಕೆ.ಜಿ. ಕೆಟಮೈನ್ ಮಾದಕ ದ್ರವ್ಯ ವನ್ನು ಇಲಿಗಳು ತಿಂದಿವೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಪೊಲೀಸರು. 2011ರಲ್ಲಿ ಅಂಧೇರಿಯ ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡ 200 ಕೆ.ಜಿ. ಕೆಟಮೈನ್ ಡ್ರಗ್ಸ್ ಅನ್ನು ಸುಂಕ ಇಲಾಖೆಯ ಉಗ್ರಾಣದಲ್ಲಿ ದಾಸ್ತಾನು ಇಡಲಾಗಿತ್ತು. ಆದರೆ, ಬಿಗಿಭದ್ರತೆಯ ನಡುವೆಯೂ 34 ಕೆ.ಜಿ. ಡ್ರಗ್ಸ್ ನಾಪತ್ತೆಯಾಗಿತ್ತು. ಸಂಬಂಧ ಪೊಲೀಸರು ಇಬ್ಬರು ಆರೋಪಿ ಗಳನ್ನು ಬಂಧಿಸಿ ವಿಚಾರಣೆಯನ್ನೂ ನಡೆಸಿದ್ದರು.

Follow Us:
Download App:
  • android
  • ios