ಕೋಲ್ಕತ್ತಾ(ಜು.13): ರಾಜ್ಯದಲ್ಲಿ ವೃದ್ಧಿಸುತ್ತಿರುವ ಬಿಜೆಪಿ ಪ್ರಭಾವ ಕಂಡು ಈಗಾಗಲೇ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಂಗಾಲಾಗಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದರಿಂದ ಪ.ಬಂಗಾಳದಲ್ಲಿ ಎಲ್ಲರಿಗೂ ಬಿಜೆಪಿ ಎಂದರೆ ಭಯ ಶುರುವಾಗಿದೆ.

ಈ ಮಧ್ಯೆ ಟಿಎಂಸಿ, ಕಾಂಗ್ರೆಸ್, ಸಿಪಿಎಂ ಪಕ್ಷಗಳ ಸುಮಾರು 107 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಮುಕುಲ್ ರಾಯ್ ಹೇಳಿಕೆ ಇಡೀ ಪ.ಬಂಗಾಳವನ್ನು ತಲ್ಲಣಗೊಳಿಸಿದೆ.

ಮೂರು ಪಕ್ಷಗಳ ಒಟ್ಟು 107 ಶಾಸಕರು ಪಕ್ಷಕ್ಕೆ ಶೀರ್ಘದಲ್ಲೇ ಸೇರಲಿದ್ದಾರೆ ಎಂದು ಮುಕುಲ್ ರಾಯ್ ಘೋಷಿಸಿದ್ದಾರೆ. ಅಲ್ಲದೇ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಶಾಸಕರ ಹೆಸರನ್ನೂ ಕೂಡ ಪಟ್ಟಿ ಮಾಡಲಾಗಿದೆ ಎಂದು ರಾಯ್ ಸ್ಪಷ್ಟಪಡಿಸಿದ್ದಾರೆ.