ನವದೆಹಲಿ(ಜೂ.01): ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಅವರ ಮಸೀದಿ ಭೇಟಿ ಹೇಳಿಕೆಯನ್ನು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಖಂಡಿಸಿದ್ದಾರೆ.

ಒವೈಸಿ ಯಾವಾಗಲೂ ಧರ್ಮಾಧಾರಿತ ರಾಜಕಾರಣ ಮಾಡುತ್ತಾರೆ ಎಂದು ಹರಿಹಾಯ್ದಿರುವ ನಖ್ವಿ, ಈ ದೇಶದ ಮುಸ್ಲಿಂ ಭಾಂಧವರು ಮಸೀದಿಗಳಿಗೆ ಭೇಟಿ ನೀಡದಂತೆ ಯಾರೂ ತಡೆದಿಲ್ಲ ಎಂದು ಹೇಳಿದ್ದಾರೆ.

ಬೇಡದ ವಿಷಯಗಳ ಕುರಿತು ರಾಜಕಾರಣ ಮಾಡುವ ಒವೈಸಿ, ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಪ್ರಯತ್ನಿಸುತ್ತಾರೆ ಎಂದು ನಖ್ವಿ ಕಿಡಿಕಾರಿದ್ದಾರೆ.

ಮೋದಿ ಈ ದೇಶದ 130 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದು, ಧರ್ಮ, ಜಾತಿ ಮೀರಿದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ನಖ್ವಿ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ನಲ್ಲಿ ಮಾತನಾಡಿದ್ದ ಅಸದುದ್ದೀನ್ ಒವೈಸಿ, ಪ್ರಧಾನಿ ಮೋದಿ ಮಂದಿರಗಳಿಗೆ ಭೇಟಿ ನೀಡಬಹುದಾದರೆ ಈ ದೇಶದ ಮುಸ್ಲಿಮರು ಮಸೀದಿಗಳಿಗೆ ಭೇಟಿ ನೀಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದ್ದರು.