ಹೈದರಾಬಾದ್(ಜೂ.01): ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆದಿರುವುದರಿಂದ ದೇಶದ ಮುಸ್ಲಿಮರು ಆತಂಕ ಪಡಬೇಕಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಹೇಳಿದ್ದಾರೆ.

ಸತತ ನಾಲ್ಕನೇ ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಅಸದುದ್ದೀನ್ ಒವೈಸಿ, ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸಲು ಸಭೆ ಏರ್ಪಡಿಸಿದ್ದರು.

ಈ ವೇಳೆ ಮಾತನಾಡಿದ ಒವೈಸಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಿರುವುದರಿಂದ ಮುಸ್ಲಿಮರು ಆತಂಕ ಪಡಬೇಕಿಲ್ಲ ಎಂದು ಹೇಳಿದರು. ಪ್ರಧಾನಿ ಮಂದಿರಗಳಿಗೆ ಭೇಟಿ ನೀಡುವುದಾದರೆ ನಮಗೆ ಮಸೀದಿಗಳಿಗೆ ಭೇಟಿ ನೀಡುವ ಸ್ವಾತಂತ್ರವಿದೆ ಎಂದು ಒವೈಸಿ ನುಡಿದರು.

ಬಿಜೆಪಿಯ 300 ಸೀಟುಗಳು ನಮ್ಮಿಂದ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿರುವ ಒವೈಸಿ, ಮುಸ್ಲಿಮರು ಆತಂಕಪಡದೇ ತಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರೆಸಬೇಕು ಎಂದು ಕರೆ ನೀಡಿದ್ದಾರೆ.