ಮುಂಬೈ[ಮಾ. 08]  ತಮ್ಮ ಮಗನ ಮದುವೆಗೆ ಮುನ್ನ ಮುಖೇಶ್ ಅಂಬಾನಿ ಐವತ್ತು ಸಾವಿರ ಪೊಲೀಸ್ ಸಿಬ್ಬಂದಿಗೆ ಸ್ವೀಟ್ ಬಾಕ್ಸ್ ಕಳುಹಿಸಿಕೊಟ್ಟಿದ್ದಾರೆ. ಸಹಜವಾಗಿಯೇ ಪೊಲೀಸ್ ಸಿಬ್ಬಂದಿ ಮುಖದಲ್ಲಿ ನಗು ಮೂಡಿಸಿದ್ದಾರೆ.

ಮುಂಬೈನ ಪ್ರತಿಯೊಂದು ಪೊಲೀಸ್ ಸ್ಟೇಶನ್ ಸಿಬ್ಬಂದಿ ಅಂಬಾನಿ ಕುಟುಂಬದವರು ಕಳುಹಿಸಿದ ಸ್ವೀಟ್ ಬಾಕ್ಸ್ ಸ್ವೀಕಾರ ಮಾಡಿಕೊಳ್ಳುತ್ತಿದ್ದಾರೆ.  ಮದುವೆಯ ಆಮಂತ್ರಣ ಪತ್ರಿಕೆಯ ಜತೆ ಸಂದೇಶಗಳನ್ನು ಬರೆದು ಕಳುಹಿಸಲಾಗಿದೆ.

ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮತ್ತು ಮಕ್ಕಳ ಸಂದೇಶ ಉಳ್ಳ ಕಾರ್ಡ್ ಒಂದು ಸಹ ಬಾಕ್ಸ್ ಜತೆಗೆ ಇದೆ. ಆಶೀರ್ವಾದ ಪಡೆದುಕೊಳ್ಳುವ ರೀತಿಯಲ್ಲಿ ಮುದ್ರಿತವಾದ ಕಾರ್ಡ್ ಗಳನ್ನು ಪೊಲೀಸರಿಗೆ ಕಳುಹಿಸಿಕೊಡಲಾಗಿದೆ. ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮದುವೆ ಮಾರ್ಚ್ 9 ಕ್ಕೆ ನಡೆಯಲಿದೆ.