Asianet Suvarna News Asianet Suvarna News

ಮುಕೇಶ್‌ ಅಂಬಾನಿ ಆಸ್ತಿಯಲ್ಲಿ ದೇಶವನ್ನು 20 ದಿನ ನಡೆಸಬಹುದು

ನಾಳೆ ಬೆಳಗ್ಗೆ ಸರ್ಕಾರ ಇದ್ದಕ್ಕಿದ್ದಂತೆ ದಿವಾಳಿಯಾಯ್ತು. ವ್ಯವಸ್ಥೆ ನಡೆಸಲು ಸರ್ಕಾರದ ಬಳಿ ದುಡ್ಡಿಲ್ಲ. ಇಂಥ ಸಮಯದಲ್ಲಿ ಆ ದೇಶದ ನಂ.1 ಶ್ರೀಮಂತನೊಬ್ಬ ತನ್ನೆಲ್ಲಾ ಆಸ್ತಿಯನ್ನು ನಗದು ರೂಪಕ್ಕೆ ಇಳಿಸಿ, ಅದನ್ನು ಸರ್ಕಾರಕ್ಕೆ ದಾನ ನೀಡಿದರೆ, ಆ ಹಣದಿಂದ ಎಷ್ಟುದಿನ ಸರ್ಕಾರ ನಡೆಸಬಹುದು? ಇಂಥದ್ದೊಂದು ಊಹಾತ್ಮಕ ವಿಷಯವನ್ನು ಇಟ್ಟುಕೊಂಡು ಬ್ಲೂಮ್‌ಬರ್ಗ್‌ ಸಂಸ್ಥೆ ರಾಬಿನ್‌ಹುಡ್‌ ಇಂಡೆಕ್ಸ್‌ ಎಂಬ ವರದಿಯೊಂದನ್ನು ಬಿಡುಗಡೆ ಮಾಡಿದೆ.

Mukesh Ambanis wealth could run India for 20 days

ನವದೆಹಲಿ: ನಾಳೆ ಬೆಳಗ್ಗೆ ಸರ್ಕಾರ ಇದ್ದಕ್ಕಿದ್ದಂತೆ ದಿವಾಳಿಯಾಯ್ತು. ವ್ಯವಸ್ಥೆ ನಡೆಸಲು ಸರ್ಕಾರದ ಬಳಿ ದುಡ್ಡಿಲ್ಲ. ಇಂಥ ಸಮಯದಲ್ಲಿ ಆ ದೇಶದ ನಂ.1 ಶ್ರೀಮಂತನೊಬ್ಬ ತನ್ನೆಲ್ಲಾ ಆಸ್ತಿಯನ್ನು ನಗದು ರೂಪಕ್ಕೆ ಇಳಿಸಿ, ಅದನ್ನು ಸರ್ಕಾರಕ್ಕೆ ದಾನ ನೀಡಿದರೆ, ಆ ಹಣದಿಂದ ಎಷ್ಟುದಿನ ಸರ್ಕಾರ ನಡೆಸಬಹುದು? ಇಂಥದ್ದೊಂದು ಊಹಾತ್ಮಕ ವಿಷಯವನ್ನು ಇಟ್ಟುಕೊಂಡು ಬ್ಲೂಮ್‌ಬರ್ಗ್‌ ಸಂಸ್ಥೆ ರಾಬಿನ್‌ಹುಡ್‌ ಇಂಡೆಕ್ಸ್‌ ಎಂಬ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಈ ವರದಿ ಅನ್ವಯ ಭಾರತದ ನಂ.1 ಶ್ರೀಮಂತ, ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಖೇಶ್‌ ಅಂಬಾನಿ ಅವರ ಆಸ್ತಿಯ ಮೂಲಕ ಭಾರತ ಸರ್ಕಾರವನ್ನು 20 ದಿನಗಳ ಕಾಲ ಸರಾಗವಾಗಿ ಮುನ್ನಡೆಸಬಹುದಂತೆ. 2017ರ ಡಿಸೆಂಬರ್‌ ವೇಳೆ ದೇಶದ ದೈನಂದಿನ ಖರ್ಚುವೆಚ್ಚ ಆಧರಿಸಿ ಮತ್ತು ಆ ಸಮಯದಲ್ಲಿ ನಂ.1 ಶ್ರೀಮಂತರ ಆಸ್ತಿಯನ್ನು ಲೆಕ್ಕ ಹಾಕಿ ಇಂಥದ್ದೊಂದು ಪಟ್ಟಿಯನ್ನು ಸಂಸ್ಥೆ ತಯಾರಿಸಲಾಗಿದೆ. ವಿಶ್ವದ 49 ದೇಶಗಳ ಬಗ್ಗೆ ಈ ಕುತೂಹಲಕಾರಿ ವರದಿ ಸಿದ್ಧಗೊಂಡಿದೆ. ಈ 49 ದೇಶಗಳ ಪೈಕಿ ನಾಲ್ಕು ದೇಶಗಳಲ್ಲಿ ಮಾತ್ರವೇ ನಂ.1 ಶ್ರೀಮಂತರ ಮಹಿಳೆಯರಾಗಿದ್ದಾರೆ.

ಸೈಪ್ರಸ್‌ ನಂ.1: ಸೈಪ್ರಸ್‌ನ ಶ್ರೀಮಂತ ವ್ಯಕ್ತಿ ಜಾನ್‌ ಫ್ರೆಡ್ರಿಕ್ಸನ್‌ 65000 ಕೋಟಿ ರು. ಆಸ್ತಿ ಹೊಂದಿದ್ದು, ಇದರಿಂದ ದೇಶವನ್ನು 441 ದಿನಗಳ ಕಾಲ ಮುನ್ನಡೆಸಬಹುದಾಗಿದೆ. ದೇಶದ ಜನ ಸಂಖ್ಯೆ ಕಡಿಮೆ ಇರುವ ಕಾರಣ ಹೆಚ್ಚು ದಿನ ಸರ್ಕಾರ ನಡೆಸುವುದು ಸಾಧ್ಯವಾಗಲಿದೆ.

ವಿಶ್ವದ 16ನೇ ಶ್ರೀಮಂತ ವ್ಯಕ್ತಿಯಾಗಿರುವ ಚೀನಾದ ಜಾಕ್‌ಮಾ 3 ಲಕ್ಷ ಕೋಟಿ ರು. ಆಸ್ತಿ ಹೊಂದಿರುವವರಾದರೂ, ಅವರು ಚೀನಾವನ್ನು ಕೇವಲ 4 ದಿನ ಕಾಪಾಡಬಲ್ಲರು. ಇನ್ನು ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ 6.50 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದರೂ ಅವರು ಅಮೆರಿಕವನ್ನು 5 ದಿನ ಕಾಲ ಮಾತ್ರ ಕಾಪಾಡಬಲ್ಲರು.

Follow Us:
Download App:
  • android
  • ios