ಭಾರತದ ಬೃಹತ್ ಉದ್ಯಮ ಕ್ಷೇತ್ರವಾದ ರಿಲಯನ್ಸ್ ಇದೀಗ ಮತ್ತೊಂದು ಉದ್ಯಮವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮುಂಬೈ: ಕೇಬಲ್ ಟೀವಿ ಮತ್ತು ಅಂತರ್ಜಾಲ ಕ್ಷೇತ್ರವನ್ನು ದೊಡ್ಡದಾಗಿ ಪ್ರವೇಶಿಸಲು ಸಜ್ಜಾಗಿರುವ ರಿಲಯನ್ಸ್, ಇದೀಗ ಭಾರತದ ಅತಿದೊಡ್ಡ ಕೇಬಲ್ ಆಪರೇಟರ್ ಹಾಥ್‌ವೇ ಹಾಗೂ ಡಿಇಎನ್ ನಲ್ಲಿ ಶೇರು ಖರೀದಿಗೆ ಮುಂದಾಗಿದೆ.
ಈ ಮೂಲಕ ತನ್ನ ಬ್ರಾಡ್ ಬಾಂಡ್ ಸೇವೆಯಾಗಿರುವ ಗಿಗಾಫೈಬರ್ ಸ್ಪೀಡ್ ಅನ್ನು ದೊಡ್ಡ ಮಟ್ಟದಲ್ಲಿ ಮತ್ತಷ್ಟುಹೆಚ್ಚಿಸಲು ನಿರ್ಧರಿಸಿದೆ. ಈ ಎರಡೂ ಕಂಪನಿಗಳಲ್ಲಿಯೂ ಕೂಡ ಶೇ. 25ರಷ್ಟು ಶೇರು ಖರೀದಿ ಮಾಡಲಿದೆ ಎನ್ನಲಾಗಿದೆ.
ಹ್ಯಾಥ್‌ವೇ ಖರೀದಿಗೆ ರಿಲಯನ್ಸ್ ಮಾತುಕತೆ ನಡೆಸಿರುವುದು ಹೌದು ಎಂದು ಹೇಳುತ್ತವೆ ಮೂಲಗಳು. ಅಲ್ಲದೆ, ಕೇಬಲ್ ಟೀವಿ ಉದ್ಯಮದ ಮೇಲೆ ರಿಲಯನ್ಸ್ ಚಿತ್ತ ಹರಿ ಸಿರುವುದು ಇದೇ ಮೊದಲನೇ ಬಾರಿಯೇನಲ್ಲ.
ಈ ಹಿಂದೆಯೂ ಡೆನ್ ನೆಟ್‌ವರ್ಕ್ ಅನ್ನು ರಿಲಯನ್ಸ್ ಖರೀದಿಸುವ ಸಾಧ್ಯತೆ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವರದಿಯಾಗಿತ್ತು.
