ಮುಂಬೈ(ಆ.02): ಹಾಂಗ್‌ಕಾಂಗ್ ಉದ್ಯಮಿ ಲಿ ಕಾ-ಶಿಂಗ್ ಅವರನ್ನು ಹಿಂದಿಕ್ಕಿರುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲಿಬಾಬಾ ಕಂಪನಿಯ ಮುಖಸ್ಥ ಜಾಕ್ ಮಾ ಮೊದಲ ಸ್ಥಾನದಲ್ಲಿ ಮುಂದುವರಿದ್ದಾರೆ.

ಬ್ಲೂಮ್ಬರ್ಗ್ ಬಿಲಿಯನೇರ್ಸ್‌ ಇಂಡೆಕ್ಸ್ ವರದಿಯ ಪ್ರಕಾರ ಮುಕೇಶ್ ಅಂಬಾನಿ ಆಸ್ತಿ ಈ ವರ್ಷ 77,೦೦೦ ಕೋಟಿ ರು. ಹೆಚ್ಚಳಗೊಂಡಿದೆ. ಅಲ್ಲದೇ ಕಳೆದ ತಿಂಗಳು ಬಿಡುಗಡೆಯಾಗಿರುವ ನೂತನ ೪ಜಿ ಮೊಬೈಲ್ ಫೋನ್‌ನಿಂದ 1500 ಕೋಟಿ ರು. ಹರಿದುಬರುವ ನಿರೀಕ್ಷೆ ಇದೆ. ಮುಕೇಶ್ ಅಂಬಾನಿ ಅವರು ಏಳು ವರ್ಷಗಳಲ್ಲಿ ಟೆಲಿಕಾಂ ಉದ್ಯಮಕ್ಕೆ 2 ಲಕ್ಷ ಕೋಟಿ ರು. ಹೂಡಿಕೆ ಮಾಡಿದ್ದಾರೆ.