ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್‌ ಪಿರಾಮಲ್‌ ಅವರ ವಿವಾಹ ನಿಶ್ಚಿತಾರ್ಥ ಇಟಲಿಯಲ್ಲಿ ನಡೆಯಲಿದೆ.  

ಮುಂಬೈ: ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್‌ ಪಿರಾಮಲ್‌ ಅವರ ವಿವಾಹ ನಿಶ್ಚಿತಾರ್ಥ ಇಟಲಿಯಲ್ಲಿ ನಡೆಯಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

21ರಿಂದ ಮೂರು ದಿನಗಳವರೆಗೂ ಇಟಲಿ ಲೇಕ್‌ ಕೊಮೊ ಎಂಬ ರೆಸಾರ್ಟ್‌ನಲ್ಲಿ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿದೆ. 

ಸೆ.21ರಿಂದ ಪ್ರಾರಂಭವಾಗಲಿರುವ ನಿಶ್ಚಿತಾರ್ಥ ಕಾರ್ಯಕ್ರಮವು ಸೆ.23ರ ಮಧ್ಯಾಹ್ನ ಊಟದ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗಲಿದೆ. ಇಟಲಿಯ ಲೇಕ್‌ ಕೊಮೊ ರೆಸಾರ್ಟ್‌ ಬಾಲಿವುಡ್‌ ಸೇರಿದಂತೆ ಇತರ ಸೆಲಿಬ್ರಿಟಿಗಳ ರಜಾ ದಿನಗಳ ಸುಂದರ ವಿಹಾರ ತಾಣವಾಗಿದೆ. 

ಇದೇ ಕಾರಣಕ್ಕೆ ಇಶಾ ಹಾಗೂ ಆನಂದ್‌ ಪಿರಾಮಲ್‌ ಅವರ ನಿಶ್ಚಿತಾರ್ಥ ಅಲ್ಲಿ ಹಮ್ಮಿಕೊಳ್ಳಲಾಗಿದೆ.