. ಕಾರಿನ ಹೊರಗೆ ನಿಂತಿದ್ದ ಅಶ್ವಿನಿಗೆ ಎರಡು ಭಾರಿ ಪ್ರವೀಣ್ ತನ್ನ ಕಾರಿನಿಂದ ಗುದ್ದಿದ್ದಾನೆ.
ಮೂಡಿಗೆರೆ(ಸೆ.03): ಶೀಲ ಶಂಕಿಸಿ ಆಕ್ಸಿಡೆಂಟ್ ಪ್ಲಾನ್ ಮಾಡಿದ ಪತಿರಾಯ ತನ್ನ ಪತ್ನಿಯನ್ನೇ ಕೊಲ್ಲುವುದಕ್ಕೆ ಮುಂದಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಿಳ್ಳೂರು ಗ್ರಾಮದ ಸಮೀಪದ ಪಟದೂರು ಪ್ರವೀಣ್ ಎಂಬಾತ ತನ್ನ ಝೆನ್ ಕಾರಿನಲ್ಲಿ ಬಂದು, ರಿಡ್ಜ್ ಕಾರಿನಲ್ಲಿದ್ದ ಹೆಂಡತಿ ಅಶ್ವಿನಿ ಮೇಲೆ ಆಕ್ಸಿಡೆಂಟ್ ಮಾಡಿ ಸಾಯಿಸಲು ಮುಂದಾಗಿದ್ದಾನೆ. ಕಾರಿನ ಹೊರಗೆ ನಿಂತಿದ್ದ ಅಶ್ವಿನಿಗೆ ಎರಡು ಭಾರಿ ಪ್ರವೀಣ್ ತನ್ನ ಕಾರಿನಿಂದ ಗುದ್ದಿದ್ದಾನೆ. ಅಶ್ವಿನಿ ತೀವ್ರವಾಗಿ ಗಾಯಗೊಂಡಿದ್ದು, ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ವರ್ಗಾವಣೆ ಮಾಡಲಾಗಿದೆ.
ಇನ್ನು ಅಶ್ವಿನಿಯ ರಿಡ್ಜ್ ಕಾರು ಸಂಪೂರ್ಣ ಜಖಂಗೊಂಡಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತ ಮಾಡಿ ನಾಪತ್ತೆಯಾಗಿರುವ ಪ್ರವೀಣ್'ಗಾಗಿ ಪೊಲೀಸರು ತೀವ್ರ ಶೋಧ ಮುಂದುವರೆಸಿದ್ದಾರೆ. ಬಣಕಲ್ ಎಸ್'ಐ ಮೂರ್ತಿ ಹಾಗೂ ಮೂಡಿಗೆರೆ ಸರ್ಕಲ್ ಇನ್ಸ್'ಪೆಕ್ಟರ್ ಜಗದೀಶ್ ವಿಶೇಷ ತಂಡ ರಚಿಸಿ ಆರೋಪಿ ಪ್ರವೀಣ್ ಗಾಗಿ ಬಲೆ ಬೀಸಿದ್ದಾರೆ.
