ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ಬಿಗ್ ಶಾಕ್ ನೀಡಿದೆ. ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚಿಸಿದ್ದು, ಬಿ ರಿಪೋರ್ಟ್ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಮೇ 7ರೊಳಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಬೇಕು.

ಬೆಂಗಳೂರು (ಏ.15): ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಜನಪ್ರತಿನಿಧಿ ಕೋರ್ಟ್‌ ಬಿಗ್‌ ಶಾಕ್‌ ನೀಡಿದ್ದು, ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚನೆ ನೀಡಿದೆ. ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್‌ ಬಗ್ಗೆ ಸದ್ಯಕ್ಕೆ ಯಾವುದೇ ಆದೇಶವಿಲ್ಲ ಎಂದು ಕೋರ್ಟ್‌ ತಿಳಿಸಿದೆ. 

ಲೋಕಾಯುಕ್ತರ ಅಂತಿಮ ವರದಿಯ ಬಳಿಕವೇ ಬಿ ರಿಪೋರ್ಟ್‌ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಕೋರ್ಟ್‌ ತಿಳಿಸಿದೆ. ಅಲ್ಲದೆ, ಇಡಿ ಕೂಡ ತಕರಾರು ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೋರ್ಟ್‌ ತಿಳಿಸಿದ್ದು, ಮೇ 7ರ ಒಳಗಾಗಿ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ನೀಡಬೇಕು ಎಂದು ತಿಳಿಸಲಾಗಿದ್ದು, ಅಲ್ಲಿಯವರೆಗೆ ಇಡಿ ತನಿಖೆಗೂ ಕೂಡ ತಡೆ ಇರಲಿದೆ.

ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್‌ ಸಲ್ಲಿಕೆ ಆದ ಬಳಿಕ ಅದನ್ನು ಜನಪ್ರತಿನಿಧಿ ಕೋರ್ಟ್‌ ಒಪ್ಪಿಕೊಂಡು ರಿಲೀಫ್‌ ಪಡೆಯುವ ನಿರೀಕ್ಷೆಯಲ್ಲಿ ಸಿದ್ಧರಾಮಯ್ಯ ಆಸೆಗೆ ತಣ್ಣೀರು ಎರಚಿದಂತಾಗಿದೆ. ಸದ್ಯಕ್ಕೆ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್‌ ತಿಳಿಸಿದ್ದು, ಮೇ 7ರ ಒಳಗಾಗಿ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಿದೆ. ಅಲ್ಲಿಯವರೆಗೂ ಬಿ ರಿಪೋರ್ಟ್‌ ಬಗ್ಗೆ ಯಾವುದೇ ಆದೇಶ ಇರೋದಿಲ್ಲ ಎನ್ನಲಾಗಿದೆ.ಮುಡಾ ಕೇಸ್‌ನಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ಅನ್ನು ಕೋರ್ಟ್‌ ಒಪ್ಪಿಕೊಳ್ಳಲಿದೆ ಎಂದೇ ಸಿಎಂ ಅಂದಾಜು ಮಾಡಿದ್ದರು. ಆದರೆ, ಜನಪ್ರತಿಧಿನಿಗಳ ಕೋರ್ಟ್‌ ಇದಕ್ಕೆ ಅವಕಾಶ ನೀಡಲಿಲ್ಲ.

ಮುಡಾ ಕೇಸ್‌ನಲ್ಲಿ ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ: ಇ.ಡಿ ಬೇಸರ

ಆದರೆ, ದೂರುದಾರ ಸ್ನೇಹಮಯಿ ಕೃಷ್ಣ ಯಾವುದೇ ಕಾರಣಕ್ಕೂ ಬಿ ರಿಪೋರ್ಟ್‌ಅನ್ನು ಕೋರ್ಟ್‌ ಒಪ್ಪಿಕೊಳ್ಳಬಾರದು ಎಂದು ಹೇಳಿದ್ದರು. ಅದಲ್ಲದೆ, ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ನಲ್ಲಿರುವ ದೂರನ್ನು ಪಿಕ್‌ & ಚೂಸ್‌ ಮಾಡಿದ್ದಾರೆ. ಅವರ ತನಿಖೆಯ ರೀತಿಯೇ ಸರಿಯಾಗಿಲ್ಲ ಎಂದು ಹೇಳಿದ್ದರು. ಸ್ನೇಹಮಯಿ ಕೃಷ್ಣ ಯಾವೆಲ್ಲಾ ವಿಚಾರದಲ್ಲಿ ತನಿಖೆ ಸರಿಯಾಗಿಲ್ಲ ಎಂದು ತಿಳಿಸಿದ್ದಾರೂ, ಈ ಎಲ್ಲಾ ವಿಚಾರಗಳಲ್ಲಿ ತನಿಖೆ ಮಾಡಿ ಲೋಕಾಯುಕ್ತ ಪೊಲೀಸರೀಗ ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಬೇಕಿರುತ್ತದೆ.
ಇಡಿ ಪರವಾಗಿ ಬಂದಿದ್ದ ಮಧುಕರ್‌ ದೇಶಪಾಂಡೆ, ಇಡೀ ಪ್ರಕರಣದಲ್ಲಿ ಇಡಿಗೆ ಕೂಡ ತಕರಾರು ಅರ್ಜಿ ಹಾಕುವ ಅವಕಾಶವಿದೆ ಎಂದು ಹೇಳಿದ್ದರು. ಇದನ್ನು ಕೋರ್ಟ್‌ ಕೂಡ ಒಪ್ಪಿಕೊಂಡಿದೆ.

ಕೊಟ್ಟ 14 ಸೈಟ್ ಮತ್ತೆ ವಾಪಸ್ ಪಡಿತೀವಿ, ನ್ಯಾಯಯುತವಾಗಿ ನಮಗೆ ಸೈಟ್ ಬರಬೇಕು: ಡಾ ಯತೀಂದ್ರ ಸಿದ್ದರಾಮಯ್ಯ