Asianet Suvarna News Asianet Suvarna News

ಬನ್ನೇರುಘಟ್ಟ ಸೂಕ್ಷ್ಮ ವಲಯ ವ್ಯಾಪ್ತಿ ಕಡಿತ ವಿರೋಧಿಸಿ: ಆರ್‌ಸಿ

ಸರ್ಕಾರ ಕೆಲವೇ ಜನರ ಹಿತಾಸಕ್ತಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿ ಸರ ಸೂಕ್ಷ್ಮ ವಲಯ ವ್ಯಾಪ್ತಿಯನ್ನು ಕಡಿಮೆ ಮಾಡಲು ಹೊರಡಿದೆ. ಇದಕ್ಕೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಜನರು ಪಾಲ್ಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್‌ಚಂದ್ರ ಶೇಖರ್ ಮನವಿ ಮಾಡಿದ್ದಾರೆ.

MP RC opposes deduction of Bannerghatta National Park eco-sensitive zone
Author
Bengaluru, First Published Nov 26, 2018, 9:34 AM IST

ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಲ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿ ಯನ್ನು ಇಳಿಸಲು ಹೊರಟಿರುವ ಸರ್ಕಾರದ  ಕ್ರಮವನ್ನು ವಿರೋಧಿಸುವಂತೆ ಬೆಂಗಳೂರಿನ ನಾಗರಿಕರಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‌ಚಂದ್ರ ಶೇಖರ್ ಮನವಿ ಮಾಡಿದ್ದಾರೆ.

ಸರ್ಕಾರ ಕೆಲವೇ ಜನರ ಹಿತಾಸಕ್ತಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿ ಸರ ಸೂಕ್ಷ್ಮ ವಲಯ ವ್ಯಾಪ್ತಿಯನ್ನು ಕಡಿಮೆ ಮಾಡಲು ಹೊರಡಿದೆ. ಇದಕ್ಕೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಜನರು ಪಾಲ್ಗೊಳ್ಳಬೇಕು. ಸರ್ಕಾರದ ಈ ವನ್ಯಜೀವಿ ಸಂರಕ್ಷಣೆಗೆ ಮಾರಕವಾದ ಕ್ರಮ ಕೈಗೊಳ್ಳಲು ಹೊರಟಿರುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸಬೇಕು ಎಂದು ಟ್ವೀಟ್ ಮೂಲಕ ಕೋರಿದ್ದಾರೆ.

ಬೆಂಗಳೂರಿಗೆ ಸಮೀಪದಲ್ಲಿರುವ ಬನ್ನೇ ರುಘಟ್ಟ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದು. 25,000 ಎಕರೆ (104.27ಕಿಮೀ)ಗಳ ಈ ಅಪರೂಪದ ವನ್ಯಜೀವಿಗಳ ಉದ್ಯಾನ ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳ. ಇಂಥಹ ಅಪರೂಪದ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗಾಗಿ ಸುತ್ತ ಮುತ್ತಲ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ, ಬೃಹತ್ ನಿರ್ಮಾಣ ಚಟುವಟಿಕೆ ನಿಲ್ಲಿಸಲು 268.9 ಚ.ಕಿ.ಮೀ. ವ್ಯಾಪ್ತಿ ಯನ್ನು ಸೂಕ್ಷ್ಮ ವಲಯ ಎಂದು 2016 ರಲ್ಲಿ ಕೇಂದ್ರ ಸರ್ಕಾರ ಅಧಿ ಸೂಚನೆ ಪ್ರಕಟಿಸಿತ್ತು. 

ನಂತರ 2017 ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯ ಪಡೆದ ಕೇಂದ್ರ ಸರ್ಕಾರ ಇದನ್ನು 181 . 5 ಚ.ಕಿ.ಮೀಗೆ ಇಳಿಸಲು ನಿರ್ಧರಿಸಿತ್ತು. ಇದಕ್ಕೆ ಯಾವುದೇ ಆಕ್ಷೇಪಣೆ ವ್ಯಕ್ತವಾಗದೆ ಅಂತಿಮಗೊಳಿಸ ಲಾಗಿತ್ತು. ನಂತರ 2018 ರ ಮೇನಲ್ಲಿ ರಾಜ್ಯ ಅರಣ್ಯ ಇಲಾಖೆ ಹೊಸ ಪ್ರಸ್ತಾವನೆ ಸಲ್ಲಿಸಿ, 268 .9 ಚ.ಕಿ.ಮೀ. ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯನ್ನು 100 ಕಿ. ಮೀ.ನಷ್ಟು ಕಡಿಮೆ ಮಾಡಲು ಮುಂದಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.

Follow Us:
Download App:
  • android
  • ios