ಬೆಂಗಳೂರು(ಮಾ.22): ಬಾಲಾಕೋಟ್ ದಾಳಿಯ ಸಾಕ್ಷಿ ಕೇಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಅವರನ್ನು ಸಂಸದ ರಾಜೀವ್ ಚಂದ್ರಶೇಖರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೈನಿಕರು, ಸೈನ್ಯದ ಕುರಿತು ಕಾಂಗ್ರೆಸ್ ಪಕ್ಷ ಹೊಂದಿರುವ ತಾತ್ಸಾರ  ಮನೋಭಾವನೆಯನ್ನೇ ಸ್ಯಾಮ್ ಪಿತ್ರೋಡಾ ಪ್ರತಿಧ್ವನಿಸಿದ್ದಾರೆ ಎಂದು ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜೀವ್ ಚಂದ್ರಶೇಖರ್, ಸೈನ್ಯದ ಆತ್ಮಸ್ಥೈರ್ಯ ಕುಗ್ಗಿಸುವ ಕಾಂಗ್ರೆಸ್ ಹುನ್ನಾರದ ಭಾಗವಾಗಿ ಸ್ಯಾಮ್ ಪಿತ್ರೋಡಾ ಅವರಿಂದ ಇಂತಹ ಹೇಳಿಕೆ ಬಂದಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದು ನೆನಪಾದಾಗ ಭಾರತಕ್ಕೆ ಬರುವ ಸ್ಯಾಮ್ ಪಿತ್ರೋಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಸೈನ್ಯದ ಕುರಿತು ಪ್ರಶ್ನೆ ಮಾಡುವ ಹಕ್ಕಿಲ್ಲ ಎಂದು ರಾಜೀವ್ ಚಂದ್ರಶೇಖರ್ ಗುಡುಗಿದ್ದಾರೆ.