ಬೆಂಗಳೂರಿನ ಭ್ರಷ್ಟ ರಾಜಕಾರಣದ ಒಳಸಂಚಿನಲ್ಲಿ ಸಾರ್ವಜನಿಕ ಹಣ ಮತ್ತು ಭೂಮಿ ನಿರ್ಣಾಯಕವಾಗಿದೆ. ಈ ನಡುವೆ ಅಕ್ರಮ ಕಸ್ರಮ ಯೋಜನೆಯು ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರ ನೀಡಿರುವ ಪುರಸ್ಕಾರದಂತಿದೆ. ಕಾನೂನು ಪಾಲಿಸುವವರಿಗಿಂತ ಕಾನೂನು ಉಲ್ಲಂಘಿಸುವವರೇ ಹೆಚ್ಚು ಲಾಭ ಪಡೆಯುತ್ತಾರೆಂಬ ಸಂದೇಶ ನೀಡುತ್ತಿದೆ.

ಬೆಂಗಳೂರು(ಜ.13): ರಾಜ್ಯ ಸರ್ಕಾರ ಜಾರಿ ತರಲುದ್ದೇಶಿಸಿದ್ದ ಅಕ್ರಮ ಸಕ್ರಮಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದು ಬೆಂಗಳೂರಿಗೆ ಸಂದಿರುವ ಮಹತ್ತರ ಜಯ ಎಂದು ಸಂಸದ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನದ ಸ್ಥಾಪಕ ರಾಜೀವ್‌ಚಂದ್ರಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಭ್ರಷ್ಟ ರಾಜಕಾರಣದ ಒಳಸಂಚಿನಲ್ಲಿ ಸಾರ್ವಜನಿಕ ಹಣ ಮತ್ತು ಭೂಮಿ ನಿರ್ಣಾಯಕವಾಗಿದೆ. ಈ ನಡುವೆ ಅಕ್ರಮ ಕಸ್ರಮ ಯೋಜನೆಯು ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರ ನೀಡಿರುವ ಪುರಸ್ಕಾರದಂತಿದೆ. ಕಾನೂನು ಪಾಲಿಸುವವರಿಗಿಂತ ಕಾನೂನು ಉಲ್ಲಂಘಿಸುವವರೇ ಹೆಚ್ಚು ಲಾಭ ಪಡೆಯುತ್ತಾರೆಂಬ ಸಂದೇಶ ನೀಡುತ್ತಿದೆ.

ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಬಿಲ್ಡರ್‌ಗಳು, ಶ್ರೀಮಂತರು ಹಾಗೂ ಪ್ರಭಾವಶಾಲಿಗಳನ್ನು ಶಿಕ್ಷಿಸುವ ಬದಲಿಗೆ ಅವರಿಗೆ ಇನ್ನಷ್ಟು ಲಾಭ ಮಾಡುವ ಅಕ್ರಮಗಳಿಂದ ಅವರನ್ನು ರಕ್ಷಿಸುವ ಹುನ್ನಾರವನ್ನು ಅಕ್ರಮಸಕ್ರಮದ ಮೂಲಕ ಮಾಡಲಾಗಿದೆ. ರಾಜ್ಯ ಸರ್ಕಾರದ ವೈಲ್ಯ ಮತ್ತು ಆಡಳಿತದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಹೇಗೆ ಬೇರೂರಿವೆ ಎಂಬುದಕ್ಕೆ ಅಕ್ರಮ ಸಕ್ರಮ ಜಾರಿಯೇ ಸಾಕ್ಷಿಯಾಗಿದೆ.

ಬಿಲ್ಡರ್‌ಗಳಿಗೆ ಲಾಭ ಮಾಡುವ ಬದಲಿಗೆ ಬಡವರಿಗೆ ಅನುಕೂಲವಾಗುವಂತೆ ಅಕ್ರಮ ಸಕ್ರಮ ಯೋಜನೆ ಪುನರ್‌ಪರಿಶೀಲಿಸಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಲಾಗಿತ್ತು. ಬಿಲ್ಡರ್‌ಗಳು ಮತ್ತು ಸರ್ಕಾರದಲ್ಲಿರುವ ಅವರ ಸ್ನೇಹಿತರಿಗೆ ಬೆಂಗಳೂರಿನ ಆಳ್ವಿಕೆಗೆ ಎಂದಿಗೂ ಅವಕಾಶ ನೀಡಲಾಗದು ಎಂದಿರುವ ಸಂಸದ ರಾಜೀವ್ ಚಂದ್ರಶೇಖರ್ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ಮಕರ ಸಂಕ್ರಾಂತಿ ಹಬ್ಬದ ಅವಸರದಲ್ಲಿ ಅಕ್ರಮದ ವಿರುದ್ಧ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.