ಮಂಡ್ಯ(ಸೆ.23):ಪಟ್ಟಣದಲ್ಲಿ ಇವತ್ತು ಕೆಲ ಹೋರಾಟಗಾರರು ಮೈಸೂರು ಸಂಸದ ಪ್ರತಾಪ್ ಸಿಂಹಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡರು.ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶ ಮಾಡದ ಉಳಿದಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಸಂಸದರು, ಶಾಸಕರು ಯಾಕೆ ಯಾಕೆ ರಾಜೀನಾಮೆ ನೀಡ್ತಿಲ್ಲ?. ಸರ್ವಪಕ್ಷ ಸಭೆಗೆ ಗೈರು ಆಗಿದ್ದು ಯಾಕೆ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದರು. ಆ ನಂತರ ಮಾತನಾಡಿದ ಸಂಸದ ಪ್ರತಾಪ್​​ ಸಿಂಹ ನಾವೆಲ್ಲರೂ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಜೊತೆಗಿದ್ದೇವೆ. ಪ್ರಧಾನಿಯವರನ್ನು ನಿನ್ನೆ ಸದಾನಂದ ಗೌಡರು ಭೇಟಿ ಮಾಡಿದ್ದಾರೆ. ಜನರ ಆಕ್ರೋಶ ನಮಗೂ ಅರ್ಥವಾಗುತ್ತದೆ ಎಂದು ಹೇಳಿದರು.