ಹುಣಸೂರು ನಗರಸಭಾ ಗದ್ದುಗೆ ಏರುವಲ್ಲಿ ಪ್ರಜ್ವಲ್ ರೇವಣ್ಣ ಯಶಸ್ವಿಯಾಗಿದ್ದಾರೆ.   ಎಲ್ಲ ಘಟಾನುಘಟಿಗಳ ಮಧ್ಯೆ ಪ್ರಜ್ವಲ್ ರೇವಣ್ಣ ತನ್ನ ಸಾಮಾರ್ಥ್ಯ ಸಾಬೀತುಪಡಿಸಿದ್ದಾರೆ.  

ಮೈಸೂರು (ಜ.19): ಹುಣಸೂರು ನಗರಸಭಾ ಗದ್ದುಗೆ ಏರುವಲ್ಲಿ ಪ್ರಜ್ವಲ್ ರೇವಣ್ಣ ಯಶಸ್ವಿಯಾಗಿದ್ದಾರೆ. ಎಲ್ಲ ಘಟಾನುಘಟಿಗಳ ಮಧ್ಯೆ ಪ್ರಜ್ವಲ್ ರೇವಣ್ಣ ತನ್ನ ಸಾಮಾರ್ಥ್ಯ ಸಾಬೀತುಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಣಸೂರು ನಗರಸಭೆಯನ್ನು ಜೆಡಿಎಸ್ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 30 ಮತಗಳಲ್ಲಿ 16 ಮತಗಳು ಜೆಡಿಎಸ್ ಪಾಲಾಗಿವೆ. ಕೇವಲ 8 ಜೆಡಿಎಸ್ ಸದಸ್ಯರಿದ್ದರೂ ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ.

ಸಂಸದ ಪ್ರತಾಪ್ ಸಿಂಹ ಕೂಡ ಪ್ರಜ್ವಲ್'​ಗೆ ಸಾಥ್ ನೀಡಿದ್ದಾರೆ. ಜೆಡಿಎಸ್ ಪರ ಪ್ರತಾಪ್ ಸಿಂಹ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ಸನ್ನು ಸೋಲಿಸುವ ಉದ್ದೇಶದಿಂದ ಜೆಡಿಸ್'ಗೆ ಬೆಂಬಲ ನೀಡಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್'ರನ್ನು ಅಧ್ಯಕ್ಷನನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.