ಪ್ರಭಾ ಬೆಳವಂಗಲ ಎಂಬವರ ವಿರುದ್ಧ ದೂರು ನೀಡಿದ್ದರೂ ಇದುವರೆಗೆ ಪೊಲೀಸರು FIR ದಾಖಲಿಸಿಲ್ಲ, ದೂರು ಕೊಟ್ಟು ಹತ್ತು ದಿನ ಕಳೆದರೂ ಪೊಲೀಸ್ ಆಯುಕ್ತರು ಮಾಹಿತಿ ನೀಡುತ್ತಿಲ್ಲವೆಂದು ಪ್ರತಾಪ್ ಸಿಂಹ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.31): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಫೇಸ್'ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದಿದ್ದವರ ವಿರುದ್ಧ ಎಫ್'ಐಆರ್ ದಾಖಲಿಸದ ಬೆಂಗಳೂರು ಪೊಲೀಸರ ವಿರುದ್ಧ ಬಿಜೆಪಿ ಸಂಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಭಾ ಬೆಳವಂಗಲ ಎಂಬವರ ವಿರುದ್ಧ ದೂರು ನೀಡಿದ್ದರೂ ಇದುವರೆಗೆ ಪೊಲೀಸರು FIR ದಾಖಲಿಸಿಲ್ಲ, ದೂರು ಕೊಟ್ಟು ಹತ್ತು ದಿನ ಕಳೆದರೂ ಪೊಲೀಸ್ ಆಯುಕ್ತರು ಮಾಹಿತಿ ನೀಡುತ್ತಿಲ್ಲವೆಂದು ಪ್ರತಾಪ್ ಸಿಂಹ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೂರು ಕೊಟ್ಟವರಿಗೆ ತನಿಖೆ ವಿಚಾರ ತಿಳಿದುಕೊಳ್ಳುವ ಹಕ್ಕು ಇರುತ್ತದೆ, ಆದರೆ ಪ್ರವೀಣ್ ಸೂದ್ ಅವರು ತನಿಖೆ ಪ್ರಗತಿ ಬಗ್ಗೆ ಮಾಹಿತಿ ನೀಡುತ್ತಿಲ್ಲ, ಕರೆ ಮಾಡಿದರೆ ಪ್ರವೀಣ್ ಸೂದ್ ಪೋನ್ ಸ್ವೀಕರಿಸುತ್ತಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಒಬ್ಬ ಸಂಸದನಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರೆ ಅರ್ಥ ಏನು? ಸಂಸದರಿಗೆ ಸ್ಪಂದನೆ ಇಲ್ಲ ಅಂದರೆ ಜನಸಾಮಾನ್ಯರಿಗೆ ಸ್ಪಂದಿಸುತ್ತಾರಾ? ಪೊಲೀಸ್ ಕಂಟ್ರೋಲ್ ರೂಂ ಅಸ್ವಸ್ಥವಾಗಿದೆ ಎಂದು 108 ಗೆ ಪೋನ್ ಮಾಡಬೇಕಾ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.