12 ಎತ್ತು, 3 ಎಮ್ಮೆ ಗಳನ್ನು ರಕ್ಷಿಸಲಾಗಿದ್ದು,  ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಫೇಸ್'ಬುಕ್ ಲೈವ್ ಕೂಡ ನೀಡಿದ್ದಾರೆ.

ಚಿತ್ರದುರ್ಗ(ಜ.18): ಕಸಾಯಿಖಾನೆ ಸಾಗಿಸಲಾಗುತ್ತಿದೆ ಎನ್ನಲಾದ ಜಾನುವಾರುಗಳನ್ನು ಸಂಸದ ಪ್ರತಾಪ್ ಸಿಂಹ ರಕ್ಷಿಸಿದ ಘಟನೆ ಚೆಳ್ಳೆಕೆರೆ ಸಮೀಪದ ಇಟೋಬನದಹಳ್ಳಿಯ ಬಳಿ ನಡೆದಿದೆ.

ಸಂಸದ ಪ್ರತಾಪ್ ಸಿಂಹ ಅವರು ಕುಷ್ಟಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದಾಗ ಸಮೀಪದ ಡಾಬಾ ಬಳಿ ಕ್ಯಾಂಟರ್ ವಾಹನದ ಮೂಲಕ ಕಳ್ಳತನದಿಂದ ಜಾನುವಾರುಗಳನ್ನು ಸಾಗಿಸಲಾಗುತ್ತಿರುವುದನ್ನು ಗಮನಿಸಿದ್ದಾರೆ. ಸ್ವತಃ ತಪಾಸಣೆ ನಡೆಸಿ ಚೆಳ್ಳಕೆರೆ ಡಿವೈಎಸ್ಪಿಗೆ ಕರೆ ಮಾಡಿ ವಿಷಯ ತಿಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

12 ಎತ್ತು, 3 ಎಮ್ಮೆ ಗಳನ್ನು ರಕ್ಷಿಸಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಫೇಸ್'ಬುಕ್ ಲೈವ್ ಕೂಡ ನೀಡಿದ್ದಾರೆ.