ನಿನ್ನೆ ಮತ್ತೆ ತೀವ್ರ ನೋವು ಕಾಣಿಸಿಕೊಂಡಾಗ ಶಿರಸಿಯ ಟಿಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ.
ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ತನ್ನ ತಾಯಿಯ ಅನಾರೋಗ್ಯಕ್ಕೆ ವೈದ್ಯರು ಸ್ಪಂದಿಸಿಲ್ಲ ಎನ್ನುವ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಶಿರಶಿಯಲ್ಲಿ ನಡೆದಿದೆ. ಸಂಸದರು ವೈದ್ಯರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಸಂಸದರ ಅಸಭ್ಯ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸಂಸದರ ತಾಯಿ 9 ದಿನದ ಹಿಂದೆ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ನಿನ್ನೆ ಮತ್ತೆ ತೀವ್ರ ನೋವು ಕಾಣಿಸಿಕೊಂಡಾಗ ಶಿರಸಿಯ ಟಿಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಆಪ್ತರು ಈ ವಿಚಾರವನ್ನ ಸಂಸದರ ಕಿವಿಗೆ ಊದಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಏಕಾಏಕಿ ಆಸ್ಪತ್ರೆಗೆ ಆಗಮಿಸಿದ ಅನಂತ್ಕುಮಾರ್ ಹೆಗಡೆ ಜನನಾಯಕ ಅನ್ನೋದನ್ನು ಮರೆತು ಡಾ. ಮಧುಕೇಶ್ವರ ಭಟ್, ಡಾ. ಬಾಲಚಂದ್ರ ಭಟ್ ಮತ್ತು ಸಿಬ್ಬಂದಿ ರಾಹುಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವೈದ್ಯರು ಸರಿಯಾಗಿ ಟ್ರೀಟ್ ಮಾಡಿಲ್ಲ ಎಂದರೆ ಹೀಗೆನಾ ವರ್ತಿಸೋದು, ವೈದ್ಯರ ಕಾರಣ ಕೇಳೋ ಸಹನೆಯೂ ಇರಬಾರದಾ ಶೇಮ್ ಶೇಮ್ ಎನ್ನುತ್ತಿದ್ದಾರೆ ಜನ. ಇದಕ್ಕೆ ಬಿಜೆಪಿ ನಾಯಕರೆ ಉತ್ತರಿಸಬೇಕಿದೆ.
ವರದಿ: ಕಡತೋಕಾ ಮಂಜು, ಸುವರ್ಣ ನ್ಯೂಸ್
