ಮಗುವನ್ನು ಬೆಳ್ಳಗೆ ಮಾಡಲು ಕಲ್ಲಿನಿಂದ ಉಜ್ಜಿದ ತಾಯಿ

First Published 3, Apr 2018, 11:11 AM IST
Mother Scrubs 5 year old with stone
Highlights

ತಾಯಿಗೆ ಹೆಗ್ಗಣವೂ ಮುದ್ದು ಎಂಬ ಮಾತಿದೆ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬಳು ತಾನು ದತ್ತು ಪಡೆದ ಮಗು ಕಪ್ಪಾಗಿದ್ದರಿಂದ, ಮೈ ಬಣ್ಣವನ್ನು ಬದಲಿಸಲು ಕಲ್ಲಿನಿಂದ ಉಜ್ಜಿ ಬೆಳ್ಳಗಾಗಿಸಲು ಯತ್ನಿಸಿದ್ದು, ಮಗುವಿನ ಜೀವಕ್ಕೇ ಅಪಾಯ ತಂದಿದೆ.

ತಾಯಿಗೆ ಹೆಗ್ಗಣವೂ ಮುದ್ದು ಎಂಬ ಮಾತಿದೆ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬಳು ತಾನು ದತ್ತು ಪಡೆದ ಮಗು ಕಪ್ಪಾಗಿದ್ದರಿಂದ, ಮೈ ಬಣ್ಣವನ್ನು ಬದಲಿಸಲು ಕಲ್ಲಿನಿಂದ ಉಜ್ಜಿ ಬೆಳ್ಳಗಾಗಿಸಲು ಯತ್ನಿಸಿದ್ದು, ಮಗುವಿನ ಜೀವಕ್ಕೇ ಅಪಾಯ ತಂದಿದೆ. ನಿಶಾತ್‌ಪುರ ಪ್ರದೇಶದ ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ಸುಧಾ ತ್ರಿವೇದಿ ಎಂಬಾಕೆ ಉತ್ತರಾಖಂಡದಿಂದ ಮಗುವೊಂದನ್ನು ದತ್ತುಪಡೆದಿದ್ದಳು.

ಆದರೆ, ಮಗುವಿನ ಮೈ ಬಣ್ಣದಿಂದ ಆಕೆಯ ಅತ್ತೆ ಕೋಪಗೊಂಡಿದ್ದಳು. ಕಪ್ಪು ಕಲ್ಲಿನಿಂದ ಮೈ ಉಜ್ಜಿದರೆ ಮಗು ಬೆಳ್ಳಗಾಗುತ್ತದೆ ಎಂದು ಯಾರೋ ಒಬ್ಬರು ಆಕೆಗೆ ಸಲಹೆ ನೀಡಿದ್ದರು. ಇದನ್ನು ನಂಬಿ ಆಕೆ ಹಾಗೆಯೇ ಮಾಡಿದ್ದು, ತೀವ್ರವಾಗಿ ಗಾಯಗೊಂಡ ಮಗುವನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

loader