ಆನ್ ಲೈನ್ ಗೇಮ್ ಸೃಷ್ಟಿಸಿದ ಅವಾಂತರ ಎಂತಾದ್ದು ಗೊತ್ತಾ..?

Mother's horror as her infant daughter is confronted with a 'sex room' while playing a video game
Highlights

ಆನ್‌ಲೈನ್ ವಿಡಿಯೋ ಗೇಮ್‌ಗಳು ಇಂದಿನ ಜಗತ್ತನ್ನು ಆಳತೊಡಗಿವೆ. ಹಾಲುಗಲ್ಲದ ಕಂದಮ್ಮಗಳಿಂದ ಹಿಡಿದು ಹಲ್ಲೇ ಇಲ್ಲದ ಅಜ್ಜ ಅಜ್ಜಿಯಂದಿರೂ ಈ ವಿಡಿಯೋ ಗೇಮ್‌ಗಳ ದಾಸರಾಗಿದ್ದಾರೆ. ಆದರೆ ಈ ವಿಡಿಯೋ ಗೇಮ್‌ಗಳು ಮಕ್ಕಳ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಕುರಿತು ಗಮನ ಹರಿಸುವುದೂ ಪೋಷಕರ ಕರ್ತವ್ಯವಾಗಿದೆ.

ಬೆಂಗಳೂರು(ಜೂ.5): ಆನ್‌ಲೈನ್ ವಿಡಿಯೋ ಗೇಮ್‌ಗಳು ಇಂದಿನ ಜಗತ್ತನ್ನು ಆಳತೊಡಗಿವೆ. ಹಾಲುಗಲ್ಲದ ಕಂದಮ್ಮಗಳಿಂದ ಹಿಡಿದು ಹಲ್ಲೇ ಇಲ್ಲದ ಅಜ್ಜ ಅಜ್ಜಿಯಂದಿರೂ ಈ ವಿಡಿಯೋ ಗೇಮ್‌ಗಳ ದಾಸರಾಗಿದ್ದಾರೆ. ಆದರೆ ಈ ವಿಡಿಯೋ ಗೇಮ್‌ಗಳು ಮಕ್ಕಳ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಕುರಿತು ಗಮನ ಹರಿಸುವುದೂ ಪೋಷಕರ ಕರ್ತವ್ಯವಾಗಿದೆ.

ಆಸ್ಟ್ರೆಲೀಯಾದ ಸಿಡ್ನಿಯಲ್ಲಿ ನಡೆದ ಈ ಘಟನೆ ಎಲ್ಲ ಪೋಷಕರಿಗೂ ಒಂದು ಪಾಠವಾಗಬಲ್ಲದು ಎಂಬುದರಲ್ಲಿ ಸಂಶಯವಿಲ್ಲ. ತನ್ನ ೬ ವರ್ಷದ ಮಗಳು ಆನ್‌ಲೈನ್ ನಲ್ಲಿ ಆಟವಾಡುತ್ತಾ ಅಚಾನಕ್ಕಾಗಿ ಅದರಲ್ಲಿದ್ದ ‘ಸೆಕ್ಸ್ ರೂಂ’ಹಂತದ ಆಟಕ್ಕೆ ಮುಂದಾಗಿದ್ದನ್ನು ತಾಯಿ ಗಮನಿಸಿ ಆಟ ನಿಲ್ಲಿಸಿದ್ದಾಳೆ. 

ರೊಬ್ಲಾಕ್ಸ್ ಎಂಬ ಆನ್‌ಲೈನ್ ಗೇಮ್‌ನಲ್ಲಿ ಪರಸ್ಪರ ಬೇರೆ ಬೇರೆ ಸ್ಥಳಗಳಲ್ಲಿ ಕುಳಿತಿರುವ ಇಬ್ಬರು ಒಟ್ಟಿಗೆ ಆಟ ಆಡಬಹುದು. ಈ ವೇಳೆ ಮಗು ಆಟವಾಡುತ್ತಾ ಆತ ಹೇಳಿದ ‘ಸೆಕ್ಸ್ ರೂಂ’ಒಳಗೆ ಹೋಗಲು ಮುಂದಾಗಿದ್ದಾಳೆ. ಇದರಲ್ಲಿ ಗ್ರಾಫಿಕ್ಸ್ ನಲ್ಲಿ ಸೃಷ್ಟಿಸಲಾದ ಗೊಂಬೆಗಳು ಪರಸ್ಪರ ರತಿಕ್ರೀಡೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಆದರೆ ಮಗುವಿಗೆ ಇದ್ಯಾವುದರ ಪರಿವೇ ಇಲ್ಲದೇ ಆತ ಕರೆದಿದ್ದ ಕೋಣೆಯೊಳೆಗೆ ಪ್ರವೇಶಿಸಲು ಆಟ ಮುಂದುವರೆಸಿದ್ದಾಳೆ.

ಇದನ್ನು ಗಮನಿಸಿದ ತಾಯಿ ಪೆಗ್ಗಿ ಕೂಡಲೇ ಆಟವನ್ನು ನಿಲ್ಲಿಸಿ, ಮಗು ಕೋಣೆಯೊಳಗೆ ಹೋಗುವುದನ್ನು ತಡೆದಿದ್ದಾಳೆ. ರೊಬ್ಲಾಕ್ಸ್ ನಿಯಮದ ಪ್ರಕಾರ 13 ವಯಸ್ಸಿಗೂ ಮೇಲ್ಪಟ್ಟವರಷ್ಟೇ ಈ ಗೇಮ್  ಆಡಬಹುದು. ಒಂದು ವೇಳೆ ಇದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಪೋಷಕರ ಅನುಮತಿ ಪಡೆದು ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತದೆ.

loader