* ಮಂಡ್ಯ to ಮುಂಬೈ ಚಿತ್ರದ ನಾಯಕನ ತಾಯಿಗೆ ವಂಚನೆ* ಸಾಲ ತೀರಿಸಲು ಕೊಟ್ಟಿದ್ದ ಹಣವೆ ಗುಳುಂ* 13 ಲಕ್ಷ ವಂಚಿಸಿ ಪರಾರಿಯಾದ ದಿನೇಶ* ಮಂಜುಳ ಪುತ್ರ ಶೇಖರ್ ನಟಿಸಿದ್ದ ಚಿತ್ರ* ಮನೆ ಮಾರಿ ಸಾಲ ತೀರಿಸಲು ಹಣ ನೀಡಿದ್ರು* ಮೈಸೂರಿನ ಕುವೆಂಪುನಗರ ಠಾಣೆಯಲ್ಲಿ ಮಂಜುಳಾ ದೂರು
ಮೈಸೂರು(ಆ. 09): "ಮಂಡ್ಯ ಟು ಮುಂಬೈ" ಸಿನಿಮಾದ ನಾಯಕನಟರೊಬ್ಬರ ತಾಯಿ 13 ಲಕ್ಷ ರೂ ವಂಚನೆಗೊಳಗಾದ ಘಟನೆ ನಡೆದಿದೆ. ಚಿತ್ರ ನಿರ್ಮಾಣದ ಸಾಲ ತೀರಿಸಲು ಕೊಟ್ಟ ಹಣ್ಣವನ್ನ ವ್ಯಕ್ತಿಯೊಬ್ಬ ನುಂಗಿ ನೀರು ಕುಡಿದು ಪಂಗನಾಮ ಹಾಕಿದ್ದಾನೆ.
ಮಂಡ್ಯ ಟೂ ಮುಂಬೈ ಚಿತ್ರ ನಿರ್ಮಾಣದ ವೇಳೆ ಸಾಲವಾಗಿದೆ. ಈ ವೇಳೆ ಪಡೆದ 13 ಲಕ್ಷ ರೂ ಸಾಲವನ್ನು ಮರು ಪಾವತಿಸಲು ಚಿತ್ರದ ನಾಯಕ ಶೇಖರ್ ಎಂಬುವರ ತಾಯಿ ಮಂಜುಳಾ ಮನೆ ಮಾರಾಟ ಮಾಡಿರುತ್ತಾರೆ. ಸಾಲ ತೀರಿಸಲೆಂದು ಪರಿಚಯಸ್ಥರಾಗಿದ್ದ ದಿನೇಶ್ ಎಂಬುವವರಿಗೆ ಹಣ ಕೊಡುತ್ತಾರೆ. ಆದರೆ, ದಿನೇಶ್ ಸಾಲವನ್ನೂ ತೀರಿಸಲ್ಲ, ಹಣವನ್ನೂ ಮರಳಿಸಲ್ಲ. ಹೀಗಾಗಿ ಮಂಜುಳಾ ಈಗ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
