ಮೊಳಕೆ ಬರಿಸಲು ನೆನೆ ಹಾಕಲಾಗಿದ್ದ ಬತ್ತದ ಬೀಜದ ಚೀಲಗಳನ್ನು ತೆಗೆಯಲು ಹೋಗಿ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಕ್ಕಳಿಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳವಾರ ರಾತ್ರಿ ತಾಲೂಕಿನ ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಸಂಭವಿಸಿದೆ.
ಕುಂದಾಪುರ (ಮೇ.30): ಮೊಳಕೆ ಬರಿಸಲು ನೆನೆ ಹಾಕಲಾಗಿದ್ದ ಬತ್ತದ ಬೀಜದ ಚೀಲಗಳನ್ನು ತೆಗೆಯಲು ಹೋಗಿ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಕ್ಕಳಿಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳವಾರ ರಾತ್ರಿ ತಾಲೂಕಿನ ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಸಂಭವಿಸಿದೆ.
ತಾಯಿ ಭಾರತಿ, ಮಕ್ಕಳಾದ ಪೃಥ್ವಿ ಹಾಗೂ ಪ್ರಜ್ಞಾ ಮೃತರು. ಹಿರಿಯವಳಾದ ಪೃಥ್ವಿ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನಲ್ಲಿ ಅಂತಿಮ ಬಿಕಾಂ ಹಾಗೂ ಪ್ರಜ್ಞಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ತಾಯಿ ಮತ್ತು ಮಕ್ಕಳು ಕೆರೆಯಲ್ಲಿ ನೆನೆ ಹಾಕಲಾಗಿದ್ದ ಬತ್ತದ ಬೀಜದ ಚೀಲಗಳನ್ನು ತೆಗೆಯಲು ಕೆರೆಗೆ ಇಳಿದಿದ್ದರು. ಎರಡು ಚೀಲಗಳನ್ನು ಮೇಲೆತ್ತಿ ತಂದಿದ್ದ ಇವರು ಮೂರನೇ ಚೀಲವನ್ನು ಮೇಲೆ ತರುವ ವೇಳೆ ಮಕ್ಕಳ ಪೈಕಿ ಒಬ್ಬಳು ಕಾಲು ಜಾರಿಗೆ ಕೆರೆಗೆ ಬಿದ್ದಿದ್ದಾಳೆ. ಅವಳನ್ನು ರಕ್ಷಿಸಲು ಹೋದ ಇವರೂ ಅವಳೊಂದಿಗೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
