ಜಾಗತಿಕ ಆರ್ಥಿಕ ಕುಸಿತ, ಕಡಿಮೆ ಬೇಡಿಕೆಯಿಂದಾಗಿ ಜವಳಿ, ಚರ್ಮದಿಂದ ಉಕ್ಕಿನ ತನಕ ಉತ್ಪಾದಕ ವಸ್ತುಗಳ ಮಾರಾಟ ಅಪನಗದೀಕರಣದ ಮುನ್ನವೇ ಕುಸಿತ ಅನುಭವಿಸಿದೆ.
ನವದೆಹಲಿ(ಫೆ.27): ಕೇಂದ್ರ ಸರ್ಕಾರ, ಉದ್ಯೋಗ ಸೃಷ್ಟಿಗೆ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುತ್ತಿರುವ ಹೊರತಾಗಿಯೂ ಉತ್ಪಾದನಾ ವಲಯ 2015-16ನೇ ಸಾಲಿನಲ್ಲಿ ಶೇ.3.7ರಷ್ಟು ಕುಸಿತ ಕಂಡಿದೆ. ಇದು ಏಳು ವರ್ಷಗಳಲ್ಲಿಯೇ ಭಾರೀ ಕುಸಿತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉದ್ಯೋಗ ಕಡಿತ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ.
ಜಾಗತಿಕ ಆರ್ಥಿಕ ಕುಸಿತ, ಕಡಿಮೆ ಬೇಡಿಕೆಯಿಂದಾಗಿ ಜವಳಿ, ಚರ್ಮದಿಂದ ಉಕ್ಕಿನ ತನಕ ಉತ್ಪಾದಕ ವಸ್ತುಗಳ ಮಾರಾಟ ಅಪನಗದೀಕರಣದ ಮುನ್ನವೇ ಕುಸಿತ ಅನುಭವಿಸಿದೆ. ಇದರ ಪರಿಣಾಮವಾಗಿ 2016ರಲ್ಲಿ ಲಾರ್ಸನ್ ಆ್ಯಂಡ್ ಟೂಬ್ರೊ ಎಂಜಿನಿಯರಿಂಗ್ ಕಂಪನಿ 14,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಮೈಕ್ರೋಸಾಫ್ಟ್, ಐಬಿಎಂ ಮತ್ತು ನೋಕಿಯಾ ಕಂಪನಿಗಳು ಉದ್ಯೋಗ ಕಡಿತಗೊಳಿಸಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದಿನ ತಿಂಗಳಿನಲ್ಲಿ ಇನ್ನಷ್ಟು ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ.
