ವಾಯವ್ಯ ಭಾರತದಲ್ಲಿ ದೇಶದ ಪ್ರಮುಖ ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ್‌, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳು ಬರುತ್ತವೆ. ಮುಂದಿನ ಎರಡು ದಿನಗಳಲ್ಲಿ ಉತ್ತರ ಭಾರತ ಮತ್ತು ಮಧ್ಯಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ, ಅಲ್ಲಿನ ತಾಪಮಾನ ಕಡಿಮೆಯಾಗಲಿದೆ. ಆ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.
ನವದೆಹಲಿ: ಪ್ರಸ್ತುತ ವರ್ಷದ ನೈಋುತ್ಯ ಮುಂಗಾರು ಮಾರುತಗಳು ಈ ಮೊದಲು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪ್ರಮಾಣದ ಮಳೆ ತರಲಿವೆ ಎಂದು ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಎಲ್ನಿನೋ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾದ ಹಿನ್ನೆಲೆಯಲ್ಲಿ, ಈ ಬಾರಿ ದೀರ್ಘ ಕಾಲದ ಸರಾಸರಿಯ ಶೇ.98ರಷ್ಟುಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈ ಕುರಿತು ಮಂಗಳವಾರ ಇಲ್ಲಿ ಮಾಹಿತಿ ನೀಡಿರುವ ಹವಾಮಾನ ಇಲಾಖೆ ನಿರ್ದೇಶಕ ಕೆ.ಜೆ.ರಮೇಶ್, ಏಪ್ರಿಲ್ ತಿಂಗಳ ವರದಿಯಲ್ಲಿ ಈ ಬಾರಿ ದೀರ್ಘ ಕಾಲದ ಸರಾಸರಿಯ (ಎಲ್ಪಿಎ) ಶೇ.96 ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಆ ಪ್ರಮಾಣ ಶೇ.98ಕ್ಕೆ ಹೆಚ್ಚಿದೆ. ಇದಕ್ಕೆ ಮುಂಗಾರಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ನಿನೋ ಸಾಧ್ಯತೆ ಕ್ಷೀಣವಾಗಿರುವುದೇ ಕಾರಣ. ಜೊತೆಗೆ, ಜುಲೈನಲ್ಲಿ ಎಲ್ಪಿಎದ ಶೇ.96ರಷ್ಟು, ಆಗಸ್ಟ್ನಲ್ಲಿ ಎಲ್ಪಿಎದ ಶೇ.99ರಷ್ಟುಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಭೀತಿ ದೂರ: ಫೆಬ್ರವರಿಯಲ್ಲಿ ಎಲ್'ನಿನೋ ಸಾಧ್ಯತೆಯ ಬಗ್ಗೆ ಎಲ್ಲ ಹವಾಮಾನ ಮುನ್ಸೂಚನೆಗಳು ತಿಳಿಸಿದ್ದವು. ಆದರೆ ಈಗಿನ ಮುನ್ಸೂಚನೆಯ ಪ್ರಕಾರ, ಈ ವರ್ಷದ ಕೊನೆಯ ವರೆಗೂ ಎಲ್ನಿನೋ ಭೀತಿಯಿಲ್ಲ. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಮತ್ತು ಆಸ್ಪ್ರೇಲಿಯಾದ ಹವಾಮಾನ ಮಂಡಳಿಯೂ ಎಲ್ನಿನೋ ಸಾಧ್ಯತೆಯನ್ನು ತಳ್ಳಿ ಹಾಕಿವೆ' ಎಂದು ರಮೇಶ್ ಹೇಳಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ: ಇದೇ ವೇಳೆ ಮಧ್ಯಭಾರತದಲ್ಲಿ ಎಲ್ಪಿಎದ ಶೇ.100, ದಕ್ಷಿಣದಲ್ಲಿ ಎಲ್ಪಿಎದ ಶೇ.99ರಷ್ಟು, ಕಳೆದ ಮೂರು ವರ್ಷಗಳಲ್ಲಿ ನಿರೀಕ್ಷಿತ ಮಳೆಯಾಗದಿದ್ದ ವಾಯುವ್ಯ ಮತ್ತು ಈಶಾನ್ಯ ಭಾರತದಲ್ಲಿ ಈ ಬಾರಿ ಎಲ್'ಪಿಎದ ಶೇ.96ರಷ್ಟುಮಳೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.
ವಾಯವ್ಯ ಭಾರತದಲ್ಲಿ ದೇಶದ ಪ್ರಮುಖ ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳು ಬರುತ್ತವೆ. ಮುಂದಿನ ಎರಡು ದಿನಗಳಲ್ಲಿ ಉತ್ತರ ಭಾರತ ಮತ್ತು ಮಧ್ಯಭಾರತದಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ, ಅಲ್ಲಿನ ತಾಪಮಾನ ಕಡಿಮೆಯಾಗಲಿದೆ. ಆ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.
ಹವಾಮಾನ ಇಲಾಖೆ ಅಂದಾಜು ಪ್ರಕಾರ, ಶೇ. 96-104ರ ನಡುವೆ ಮಳೆ ಸುರಿದರೆ ಅದು ಸಹಜ ಮಳೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ‘ಕೊರತೆ' ಎಂದು ಪರಿಗಣಿಸಲಾಗುತ್ತದೆ. ಶೇ. 100-104ರ ಪ್ರಮಾಣದ ಮಳೆಯಾದರೆ, ಅದನ್ನು ಸಹಜಕ್ಕಿಂತ ಹೆಚ್ಚು ಎನ್ನಲಾಗುತ್ತದೆ. ಶೇ. 104ಕ್ಕಿಂತಲೂ ಹೆಚ್ಚು ಮಳೆ ಸುರಿದರೆ ಅದನ್ನು ವಿಪರೀತ ಮಳೆ ಎಂದು ಹೇಳಲಾಗುತ್ತದೆ. ಮುಂಗಾರು ಎರಡು ದಿನ ಮುಂಚಿತವಾಗಿ ಮೇ 30ರಂದು ಕೇರಳ ಪ್ರವೇಶಿಸಿದೆ. ಜೂ. 8ರಂದು ಅದು ಗೋವಾ ತಲುಪಲಿದೆ, ಜೂ. 13-14ರ ನಡುವೆ ಮುಂಬೈ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಬಿಹಾರ, ಜಾರ್ಖಂಡ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಗಾರು ಮತ್ತು ಭಾರತ: ಭಾರತ 130 ಲಕ್ಷ ಕೋಟಿ ರು. ಆರ್ಥಿಕತೆ ಹೊಂದಿದ್ದು, ಈ ಪೈಕಿ ಶೇ.15ರಷ್ಟುಪಾಲು ಕೃಷಿ ವಲಯದ್ದು. ದೇಶದ ಕೃಷಿ ವಲಯ ಬಹುತೇಕ ಮುಂಗಾರನ್ನು ಅವಲಂಬಿಸಿದೆ. ಮುಂಗಾರಿನಲ್ಲಿನ ಯಾವುದೇ ಏರುಪೇರು ದೇಶದ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರುತ್ತದೆ.
ರಾಜ್ಯದ ಹಲವೆಡೆ ಮಳೆ: 2 ಬಲಿ
ಬೆಂಗಳೂರು: ನೈಋುತ್ಯ ಮುಂಗಾರು ಮಾರುತ ಕರ್ನಾಟಕಕ್ಕೆ ಅಪ್ಪಳಿಸುವುದು ವಿಳಂಬವಾಗಿರುವ ನಡುವೆಯೇ ರಾಜ್ಯದ ಹಲವೆಡೆ ಮಂಗಳವಾರ ಮಳೆ ಅಬ್ಬರಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ತುಂಬಿ ಹರಿದ ಹಳ್ಳಕ್ಕೆ ಸಿಲುಕಿ 7 ವರ್ಷ ದ ಬಾಲಕಿ ಸಾವನ್ನಪ್ಪಿದ್ದರೆ, ವಿಜಯ ಪುರ ಜಿಲ್ಲೆಯಲ್ಲಿ ಸಿಡಿಲ ಹೊಡೆತಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿ ದ್ದಾರೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ಕಡ ಲ್ಕೊರೆತಕ್ಕೆ ಮನೆಯೊಂದು ಭಾಗಶಃ ಕೊಚ್ಚಿ ಹೋಗಿದೆ. ಉತ್ತರ ಕರ್ನಾಟ ಕದಲ್ಲಿ ಮಳೆ ಸುರಿದಿದ್ದು, ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ.
ಯಾವ ಪ್ರದೇಶದಲ್ಲಿ ಎಷ್ಟುಮಳೆ ಸಾಧ್ಯತೆ?
* ಶೇ.99: ದಕ್ಷಿಣ ಭಾರತದಲ್ಲಿ ಸಾಮಾನ್ಯ ಸರಾಸರಿಗೆ ಹೋಲಿಸಿದರೆ ಇಷ್ಟು ಮಳೆಯೆಯಾಗುವ ನಿರೀಕ್ಷೆ
* ಶೇ. 100: ಪಂಜಾಬ್, ಹರ್ಯಾಣ, ಉತ್ತರಪ್ರದೇಶ ಸೇರಿದಂತೆ ಮಧ್ಯಭಾರತದಲ್ಲಿ ಮಳೆಯ ಅಂದಾಜು
* ಶೇ. 95: ಭಾರತದ ವಾಯವ್ಯ ಮತ್ತು ಈಶಾನ್ಯ ದಿಕ್ಕಿನಲ್ಲಿ ಸಂಭಾವ್ಯ ಮುಂಗಾರು ಮಳೆ ಪ್ರಮಾಣ
ಕನ್ನಡಪ್ರಭ ವಾರ್ತೆ
epaper.kannadaprabha.in
