ದೇಶದ ರೈತರಿಗೆ ಗುಡ್ ನ್ಯೂಸ್

Monsoon to cover entire country over next 2-3 days
Highlights

ದೇಶಾದ್ಯಂತದ ರೈತರಿಗೆ ಸಿಹಿ ಸುದ್ದಿಯಿದೆ. ಇನ್ನು 2-3 ದಿನಗಳಲ್ಲಿ ಇಡೀ ದೇಶವನ್ನು ಮುಂಗಾರು ಮಳೆ ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

ನವದೆಹಲಿ: ದೇಶಾದ್ಯಂತದ ರೈತರಿಗೆ ಸಿಹಿ ಸುದ್ದಿಯಿದೆ. ಇನ್ನು 2-3 ದಿನಗಳಲ್ಲಿ ಇಡೀ ದೇಶವನ್ನು ಮುಂಗಾರು ಮಳೆ ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮುಂಗಾರು ಆಗಮಿಸಿರದ ಗುಜರಾತ್‌, ರಾಜಸ್ಥಾನದ ಹಲವು ಭಾಗಗಳು ಸೇರಿದಂತೆ ದೇಶದ ಎಲ್ಲ ಭಾಗಗಳಿಗೂ ಮುಂಗಾರು ಮಳೆ ಸುರಿಯಲಿದೆ.

ಹೀಗಾಗಿ ವಾಯುವ್ಯ ಭಾಗದ ಮಳೆಯಾಗದ ಭಾಗಗಳಲ್ಲೂ ಧಾರಾಕಾರ ಮಳೆ ಸುರಿಯಲಿದೆ. ಈ ಭಾಗಗಳಲ್ಲಿ ಈಗಾಗಲೇ ಸುರಿಯುತ್ತಿರುವ ಮಳೆ ಇನ್ನೂ 2-3 ದಿನ ತೀವ್ರಗೊಳ್ಳಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದೆ. ಮುಂಬೈಯಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಮಳೆಯ ಅಬ್ಬರ ತೀವ್ರಗೊಳ್ಳಲಿದೆ.

loader