ನವದೆಹಲಿ: ಮುಂಗಾರು ನಿರೀಕ್ಷೆಗಿಂತಲೂ ಎರಡು ದಿನ ವಿಳಂಬವಾಗಿ ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಅರಬ್ಬೀ ಸಮುದ್ರ ದಲ್ಲಿ ಬುಧವಾರದ ಬಳಿಕ ಮುಂಗಾರು ಆಗಮನಕ್ಕೆ ಉತ್ತಮವಾದ ವಾತಾವರಣ ಇರಲಿದ್ದು, ಮುಂದಿನ 96 ಗಂಟೆಗಳಲ್ಲಿ ಮುಂಗಾರು ಕೇರಳವನ್ನು ತಲುಪುವ ನಿರೀಕ್ಷೆ ಇದೆ. 

ಹೀಗಾಗಿ ಜೂ. 8 ರಂದು ಮುಂಗಾರು ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಮುನ್ನ ಜೂ.6 ರಂದು ಮುಂಗಾರು ಕೇರಳಕ್ಕೆ ಆಗಮಿಸಲಿದೆ ಎಂದು ಅಂದಾಜಿಸ ಲಾಗಿತ್ತು. 

ಎರಡು ದಿನ ವಿಳಂಬವಾಗಿರುವ ಕಾರಣ ಮುಂಗಾರು ಜು. 10 ರ ವೇಳೆಗೆ ಕರ್ನಾಟಕವನ್ನು ಆವರಿಸಿಕೊಳ್ಳಲಿದ್ದು, ಕರ್ನಾಟಕದ ಉತ್ತರ ಒಳನಾಡಿನ ಭಾಗದಲ್ಲಿ ಮುಂದಿನ ಎರಡು ದಿನದಲ್ಲಿ ಗುಡುಗು, ಸಿಡಿಲಿನ ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ.