ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ನೀಡುವ ಬದಲು ಖಾತೆಗಳಿಗೆ ನೇರ ಹಣ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬೆಂಗಳೂರು(ಆ.08): ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ನೀಡುವ ಬದಲು ಖಾತೆಗಳಿಗೆ ನೇರ ಹಣ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ಬದಲು ಹಣ ನೀಡು ವುದನ್ನು ನಾವು ಒಪ್ಪುವುದಿಲ್ಲ. ಕೇಂದ್ರ ಸರ್ಕಾರ ಯಾವ ಆಹಾರದಲ್ಲಿ ಈ ನಿರ್ಧಾರ ಮಾಡುತ್ತಿದೆಯೋ ಗೊತ್ತಿಲ್ಲ. ಇದನ್ನು ರಾಜ್ಯದಲ್ಲಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಸಚಿವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಬಿಪಿಎಲ್ ಲಾನು‘ವಿಗಳಿಗೆ ಪಡಿತರ ಬದಲು ಪರ್ಯಾಯ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಚಿಂತಿಸಿತ್ತು. ಅಂದರೆ ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ಅಂಗಡಿಯಲ್ಲಿ ತಮಗಿಚ್ಛಿಸಿದ ಪದಾರ್ಥ ಖರೀದಿಸುವುದಕ್ಕೆ ಅಂಗಡಿಗಳಿಗೆ ಹಣ ನೀಡುವ ಪ್ರಸ್ತಾಪಿಸಲಾಗಿತ್ತು. ಇದರಲ್ಲಿ ಲಾನುಭವಿಗಳಿಗೆ ಹಣ ನೇರವಾಗಿ ಸಿಗುತ್ತಿಲ್ಲ. ಬದಲಾಗಿ ಪದಾರ್ಥ ನೀಡಿದ ಅಂಗಡಿ ಮಾಲೀಕರಿಗೆ ಸಿಗುತ್ತಿತ್ತು. ಆದರೆ ಈ ಚಿಂತನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಡ ಎಂದರು. ಹೀಗಾಗಿ ರದ್ದುಗೊಳಿಸಲಾಗಿತ್ತು.

ಕೇಂದ್ರ ಸರ್ಕಾರ ನೇರವಾಗಿ ಲಾನುಭವಿಗಳಿಗೆ ಹಣ ನೀಡುವುದು ಸರಿಯಲ್ಲ ಎಂದು ಖಾದರ್ ಆಕ್ಷೇಪಿಸಿದರು. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗ 17 ಸಿಲಿಂಡರ್ ಮಾಡುವುದಾಗಿ ಹೇಳಿತ್ತು. ಆದರೆ ತಮ್ಮ ಅವಧಿಯಲ್ಲಿ ಒಂದು ಸಿಲಿಂಡರ್ ಕೂಡ ಹೆಚ್ಚಿಸಲಿಲ್ಲ. ಈಗ ಸಬ್ಸಿಡಿಯನ್ನು ನೇರ ಖಾತೆಗೆ ಹಾಕುವುದಾಗಿ ವಂಚಿಸುತ್ತಿದೆ. ಅಂದರೆ ಸಬ್ಸಿಡಿ ಹಣವನ್ನೂ ಕಡಿಮೆ ಮಾಡುತ್ತಿದೆ. ಇದರಿಂದ ದೇಶದಲ್ಲಿ ಅಚ್ಛೇ ದಿನ್ ಬದಲು ಬುರೇ ದಿನ್ ಶುರುವಾಗಿದೆ ಎಂದರು. ಮುಖ್ಯಮಂತ್ರಿ ಅನಿಲ ಭಾಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶ ಮಾಡಿದೆ. ಇದಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಆ.15ರ ಬಳಿಕ ರೇಷನ್ ಕಾರ್ಡ್

ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಸಲ್ಲಿಸಿದ 14 ಅರ್ಜಿಗಳು ಪರಿಶೀಲನೆಯಾಗದೆ ಬಾಕಿ ಉಳಿದಿದ್ದು, ಆಗಸ್ಟ್ 15ರ ಒಳಗಾಗಿ ಪರಿಶೀಲನೆ ಕಾರ್ಯ ಮುಗಿಸಿ ನಂತರ ಕಾರ್ಡ್ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪಡಿತರ ಚೀಟಿಗಾಗಿ ಈತನಕ ಸುಮಾರು 16 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರ ಪೈಕಿ 2 ಲಕ್ಷ ಅರ್ಜಿಗಳ ಪರಿಶೀಲನೆ ಮುಗಿದಿದೆ. ದಿನಕ್ಕೆ 15000 ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಆಗಸ್ಟ್ 15ರ ಒಳಗಾಗಿ ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿಯಲಿದೆ. ಇದಾದ ನಂತರ ಕಾರ್ಡ್‌ಗಳು ಸಿದ್ಧವಾಗಿ ಅರ್ಜಿದಾರರ ಮನೆಗಳಿಗೆ ಅಂಚೆ ಇಲಾಖೆ ಮೂಲಕ ರವಾನೆಯಾಗಲಿದೆ ಎಂದು ವಿವರಿಸಿದರು.