ತುಮಕೂರು[ಜೂ.23]: ಕಾಂಗ್ರೆಸ್‌ ಸೋಲಿಗೆ ಜೆಡಿಎಸ್‌ ಜತೆಗಿನ ಮೈತ್ರಿ ಕಾರಣ ಎಂಬ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರ ಆರೋಪಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಯ್ಲಿ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಆ ರೀತಿ ಹೇಳಿಕೆ ನೀಡಿರಬಹುದು ಎಂದು ಹೇಳಿದರು.

ಕಾಂಗ್ರೆಸ್‌ ಸೋಲಿಗೆ ದಳ ಮೈತ್ರಿ ಕಾರಣ: ಮೊಯ್ಲಿ

ಕೊರ​ಟ​ಗೊರೆ ತಾಲೂಕಿನ ತೋವಿ​ನ​ಕೆ​ರೆ​ಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಅವರು ಸೋತಿದ್ದಾರೆ. ಹೀಗಾಗಿ ಅವರು ಮೈತ್ರಿ ಕುರಿತು ಆ ರೀತಿಯ ಹೇಳಿಕೆ ನೀಡಿರಬಹುದು. ಆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ನಮಗೆ ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗುತ್ತದೆಯೇ ಹೊರತು ವೈಯಕ್ತಿಕ ಅಭಿಪ್ರಾಯಗಳಲ್ಲ ಎಂದು ಪರಮೇಶ್ವರ್‌ ಹೇಳಿದರು.

ಸಿಎಂ ಊರೂರು ಸುತ್ತಿದ್ರೆ ಸಾಲಲ್ಲ, ಈ ಕೆಲ್ಸ ಮಾಡ್ಬೇಕಿತ್ತು: ಕೈ ನಾಯಕ ಕಿಡಿ!