ವಿವಿಧತೆಯಲ್ಲೂ ಭಾರತದ ಏಕತೆ ಕಾಪಾಡಿದ್ದು ಹಿಂದುತ್ವ

Mohan Bhagwath Talk About Hindhuism
Highlights

ಭಾರತವು ಹಿಂದೂ ರಾಷ್ಟ್ರವಾಗಿದ್ದು, ದೇಶದಲ್ಲಿ ವಿವಿಧ ಭಾಷೆಯ ಜನರು, ಧಾರ್ಮಿಕತೆ ಮತ್ತು ಬೇರೆ ಬೇರೆ ಜೀವನ ಪದ್ಧತಿ ಅನುಸರಿಸುವ ಹೊರತಾಗಿಯೂ ಭಾರತ ಏಕತೆ ಸಾಧಿಸಿದೆ. ಇದಕ್ಕೆ ಹಿಂದುತ್ವವೇ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಗುವಾಹಟಿ: ಭಾರತವು ಹಿಂದೂ ರಾಷ್ಟ್ರವಾಗಿದ್ದು, ದೇಶದಲ್ಲಿ ವಿವಿಧ ಭಾಷೆಯ ಜನರು, ಧಾರ್ಮಿಕತೆ ಮತ್ತು ಬೇರೆ ಬೇರೆ ಜೀವನ ಪದ್ಧತಿ ಅನುಸರಿಸುವ ಹೊರತಾಗಿಯೂ ಭಾರತ ಏಕತೆ ಸಾಧಿಸಿದೆ. ಇದಕ್ಕೆ ಹಿಂದುತ್ವವೇ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇಲ್ಲಿನ ಪಶು ವೈದ್ಯಕೀಯ ಕಾಲೇಜು ಮೈದಾನದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ‘ಬಹು ಸಂಸ್ಕೃತಿಯನ್ನು ಹಿಂದುತ್ವ ಒಪ್ಪಿಕೊಳ್ಳುತ್ತದೆ. ಆದರೆ, ವಿಭಜನೆಯನ್ನು ಒಪ್ಪಿಕೊಳ್ಳಲ್ಲ.

ಅದಕ್ಕಾಗಿಯೇ ಭಾರತವು ಹಿಂದೂ ರಾಷ್ಟ್ರವಾಗಿದೆ,’ ಎಂದು ಪ್ರತಿಪಾದಿಸಿದ್ದಾರೆ. ಹಿಂದುತ್ವವನ್ನು ಅಪ್ಪಿಕೊಂಡಿದ್ದಕ್ಕಾಗಿಯೇ ಭಾರತ ಇಂದು ಒಟ್ಟಾಗಿದೆ. ಆದರೆ, ಈ ಹಿಂದುತ್ವವನ್ನು ಒಪ್ಪಿಕೊಳ್ಳದ ಕಾರಣಕ್ಕಾಗಿಯೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ವಿಭಜನೆಯಾಗಿವೆ. ಜನ ಸಾಮಾನ್ಯರ ಹೃದಯಗಳನ್ನು ಗೆಲ್ಲುವತ್ತ ಭಾರತ ಇನ್ನೂ ಬಲಿಷ್ಠವಾಗಬೇಕಿದೆ, ಎಂದು ಇದೇ ವೇಳೆ ತಿಳಿಸಿದರು.

loader