ಆರ್ ಎಸ್ ಎಸ್ ಯಾರ ವಿರುದ್ಧವೂ ಕೆಲಸ ಮಾಡುತ್ತಿಲ್ಲ, ಹಿಂದೂ ಧರ್ಮವನ್ನು ಒಗ್ಗೂಡಿಸಲು ಹಾಗೂ ಇದರ ಸಬಲೀಕರಣಕ್ಕೆ ಮಾತ್ರ ಶ್ರಮಿಸುತ್ತದೆ ಎಂದು ಕಲ್ಕತ್ತದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮವೊಂದರಲ್ಲಿ ಮೋಹನ್ ಭಾಗವತ್  ಹೇಳಿದ್ದಾರೆ.  

ನವದೆಹಲಿ (ಜ.14): ಆರ್ ಎಸ್ ಎಸ್ ಯಾರ ವಿರುದ್ಧವೂ ಕೆಲಸ ಮಾಡುತ್ತಿಲ್ಲ, ಹಿಂದೂ ಧರ್ಮವನ್ನು ಒಗ್ಗೂಡಿಸಲು ಹಾಗೂ ಇದರ ಸಬಲೀಕರಣಕ್ಕೆ ಮಾತ್ರ ಶ್ರಮಿಸುತ್ತದೆ ಎಂದು ಕಲ್ಕತ್ತದಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮವೊಂದರಲ್ಲಿ ಮೋಹನ್ ಭಾಗವತ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಶ್ಚಿಮ ಬಂಗಾಳ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ನಡುವಿನ ಸಮರದ ಬಗ್ಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಆರ್ ಎಸ್ ಎಸ್ ಯಾರ ವಿರುದ್ಧವೂ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.

ಬ್ರಿಗೇಡ್ ಪ್ಯಾರೇಡ್ ಮೈದಾನದಲ್ಲಿ ಆರ್ ಎಸ್ ಎಸ್ ರ್ಯಾಲಿ ನಡೆಸಲು ಕಲ್ಕತ್ತಾ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಪೋಲಿಸರು ಅನುಮತಿ ನೀಡಲು ನಿರಾಕರಿಸಿದರು. ಪೊಲೀಸರ ಈ ನಿರ್ಧಾರದ ವಿರುದ್ಧ ಆರ್ ಎಸ್ ಎಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯ ಯ್ಯಾಲಿ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪೊಲೀಸರನ್ನು ನಿಯೋಜನೆ ಮಾಡಬೇಕೆಂದು ಹೇಳಿತು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿ ನಡುವಿನ ಸಮರ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.