ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಕೊನೆಯ ಊರು ಮಾಣಾ ಎಂಬ ಕುಗ್ರಾಮದಲ್ಲಿ ಈ ಬಾರಿ ದೀಪಗಳ ಹಬ್ಬವನ್ನು ಪ್ರಧಾನಿ ಮೋದಿ ಆಚರಿಸಲಿದ್ದಾರೆ. ಈ ಗ್ರಾಮವು ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ. 

ಉತ್ತರಾಖಂಡ(ಅ.30): ಪ್ರತಿ ವರ್ಷದ ರೂಢಿಯಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿ ಹಬ್ಬವನ್ನು ಉತ್ತರಾಖಂಡದ ಕುಗ್ರಾಮದ ಗಡಿ ಠಾಣೆಯಲ್ಲಿ ಐಟಿಬಿಪಿ ಯೋಧರ ಜತೆ ಆಚರಿಸಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ದೀಪಾವಳಿಯನ್ನು ವಿಶ್ವದ ಅತಿಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಸೈನಿಕರ ಜತೆ ಆಚರಿಸಿದ್ದರು. ಎರಡನೇ ದೀಪಾವಳಿಯನ್ನು ಪಂಜಾಬ್‌ನ ಪಾಕಿಸ್ತಾನ ಗಡಿಯಲ್ಲಿ ಆಚರಿಸಿದ್ದರು. 

ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಕೊನೆಯ ಊರು ಮಾಣಾ ಎಂಬ ಕುಗ್ರಾಮದಲ್ಲಿ ಈ ಬಾರಿ ದೀಪಗಳ ಹಬ್ಬವನ್ನು ಪ್ರಧಾನಿ ಮೋದಿ ಆಚರಿಸಲಿದ್ದಾರೆ. ಈ ಗ್ರಾಮವು ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ. 

ಪ್ರಧಾನಿ ಮೋದಿ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಇರಲಿದ್ದಾರೆ. ಇಲ್ಲಿಗೆ ಸಮೀಪದಲ್ಲಿರುವ ಬದರೀನಾಥಕ್ಕೆ ಮೋದಿ ಅವರು ಭೇಟಿ ನೀಡುವ ಸಾಧ್ಯತೆ ಇದೆ. ಗಡಿಕಾಯುವ ಸೈನಿಕರಿಗೆ ದೀಪಾವಳಿ ಶುಭಾಶಯ

ಕೋರುವಂತೆ ಪ್ರಧಾನಿ ಮೋದಿ ಈಗಾಗಲೇ ದೇಶದ ಜನರಲ್ಲಿ ಮನವಿ ಮಾಡಿದ್ದರು.

#Sandesh2Soldiers ಎಂಬ ಹ್ಯಾಶ್‌ಟ್ಯಾಗ್ ಬಳಸಿ ನರೇಂದ್ರ ಮೋದಿ ಆ್ಯಪ್, MyGov.in ಮತ್ತು ಆಲ್ ಇಂಡಿಯಾ ರೇಡಿಯೊ ಮೂಲಕವೂ ಜನರು ಶುಭಾಶಯ ಕಳುಹಿಸುತ್ತಿದ್ದಾರೆ. ಈವರೆಗೆ 10 ಲಕ್ಷ ಸಂದೇಶಗಳು ಬಂದಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.