ಬೆಳಗಾವಿಯ ಪ್ರತಿಷ್ಠಿತ ಕೆ.ಎಲ್.ಇ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಮಾಡಲು ನಾಳೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ‌. ಇವರ ಬರುವಿಕೆಗೆ ಬೆಳಗಾವಿ ಸಜ್ಜಾಗಿದ್ದು ಬೆಳಗಾವಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಬೃಹತ್ ಗಾತ್ರದ ವೇದಿಕೆ ನಿರ್ಮಾಣ ಮಾಡಲಾಗಿದೆ. ಕುಳುತು ಕೋಳ್ಳಲು ೪೫ ಸಾವಿರ ಚೇರಗಳ ವ್ಯೆವಸ್ಥೆಯನ್ನು ಮಾಡಲಾಗಿದ್ದು. ಬದ್ರತೆಗಾಗಿ ೫ ಜಿಲ್ಲೆ ಪೊಲೀಸರು ಜಮಾವಣೆ ಕೊಂಡಿದ್ದಾರೆ. ಇಡಿ ಕ್ರೀಡಾಂಗನದಲ್ಲಿ ಎಲ್ಲಿ ನೋಡಿದರಲ್ಲಿ ಪೊಲೀಸರ ಸರ್ಪಗಾವಲು ಎದ್ದು ಕಾಣುತ್ತಿದೆ. ನಾಳೆ ಮದ್ಯಾಹ್ನ ಒಂದು ಗಂಟೆಗೆ ವಿಶೇಷ ವಿಮಾನದ ಮುಖಾಂತರ ಬೆಳಗಾವಿ ಸಾಂಬ್ರಾ ವಿಮಾಣ ನಿಲ್ದಾಣಕ್ಕೆ ಆಗಮಿಸಿ. ಅಲ್ಲಿಂದ ಹೇಲಿಕ್ಯಾಪ್ಟರ್ ಮುಖಾಂತರ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ಮೈದಾನಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮುಖಾಂತರ  ಜೆಲ್ಲಾ ಕ್ರೀಡಾಂಗಣದಲ್ಲಿಯ ವೇದಿಕೆಗೆ ಅಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿಲಿದ್ದಾರೆ. ಇವರ ಜೊತೆ ಕೇಂದ್ರ ಸಚಿವ ಅನಂತಕುಮಾರ್. ಸದಾನಂದಗೌಡ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿಯಾಗಲಿದ್ದಾರೆ ಎಂದು ಕೆ.ಎಲ್.ಇ.  ಸಂಸ್ಥೆಯ ಕರ್ಯಾದ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.