ಇನ್ನೆರಡು ವರ್ಷಗಳಲ್ಲಿ ಉತ್ತರ ಪ್ರದೇಶದ ಮೇರಠ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ತಲೆ ಎತ್ತಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಮೋದಿ ಅವರ ಅಭಿಮಾನಿಗಳು ಇಲ್ಲಿಯೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬಹುದಾಗಿದೆ.

ಮೇರಠ್: ಇನ್ನೆರಡು ವರ್ಷಗಳಲ್ಲಿ ಉತ್ತರ ಪ್ರದೇಶದ ಮೇರಠ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ತಲೆ ಎತ್ತಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಮೋದಿ ಅವರ ಅಭಿಮಾನಿಗಳು ಇಲ್ಲಿಯೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬಹುದಾಗಿದೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ನರೇಂದ್ರ ಮೋದಿ ಅವರ ಪಕ್ಕಾ ಬೆಂಬಲಿಗರಾದ ಜೆ.ಪಿ.ಸಿಂಗ್,‘ಮೇರಠ್‌ನ ಸರ್ಧಾನ ಎಂಬ ಪ್ರದೇಶದ 5 ಎಕ್ರೆ ಪ್ರದೇಶದಲ್ಲಿನ ಈ ದೇವಸ್ಥಾನದಲ್ಲಿ, 100 ಅಡಿ ಎತ್ತರದ ನರೇಂದ್ರ ಮೋದಿ ಅವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ,’ ಎಂದಿದ್ದಾರೆ.

ಕಳೆದ ತಿಂಗಳ 29ರಂದಷ್ಟೇ ಕೃಷಿ ವಿಭಾಗದ ಸಹಾಯಕ ಇಂಜಿನಿಯರ್ ಹುದ್ದೆಯಿಂದ ನಿವೃತ್ತಿಯಾದ ಸಿಂಗ್, ಮದರ್ ಇಂಡಿಯಾ ಕುರಿತು ನರೇಂದ್ರ ಮೋದಿ ಅವರಿಗೆ ಇರುವ ಪ್ರೀತಿಯಿಂದಲೇ ನಾನು ಪ್ರಭಾವಿತನಾಗಿದ್ದೇನೆ. ದೇಶದಲ್ಲಿನ ಮೋದಿ ಮಾದರಿಯ ಅಭಿವೃದ್ಧಿಯ ಸ್ಮಾರಕವಾಗಿಯೂ ದೇವಸ್ಥಾನದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಮೋದಿ ಅವರ ದೇವಸ್ಥಾನ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ 10 ಕೋಟಿ ರು. ದೇಣಿಗೆ ಪಡೆಯುವ ಗುರಿಯಿದೆ. ಅ.23 ರಂದು ಭೂಮಿ ಪೂಜೆ ನಡೆಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.