500 ಹಾಗೂ 1000 ಮುಖಬೆಲೆಯ ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಾರ್ಟಿ ಹಾಗೂ ಎಡಪಕ್ಷಗಳು ಆಕ್ರೊಶ್ ದಿವಸ್ ಭಾರತ್​​ ಬಂದ್​ಗೆ ಕರೆ ನೀಡಿವೆ. ಆದ್ರೆ, ಮೋದಿ ಬೆಂಬಲಿಗರು ಸೆಡ್ಡು ಹೊಡೆದಿದ್ದು ಸಂಭ್ರಮ ದಿವಸ್ ಅಂತ ಆಚರಣೆಗೆ ಮುಂದಾಗಿವೆ.

ಬೆಂಗಳೂರು(ನ.28): 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ದಿವಸ್‍ಗೆ ಕರೆ ನೀಡಿವೆ. ಆಕ್ರೋಶ್ ದಿವಸ್ ಯಶಸ್ವಿಗೊಳಿಸಲು ರಾಜ್ಯ ಸರ್ಕಾರ ಕೂಡ ಪರೋಕ್ಷ ಬೆಂಬಲ ನೀಡುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆಯಿದೆ. ಆದರೆ, ಆಸ್ಪತ್ರೆ, ಮೆಡಿಕಲ್ ಶಾಪ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ನಾಳೆ ಏನಿರುತ್ತೆ? ಏನಿರಲ್ಲ ಎನ್ನುವುದರ ಸಂಪೂರ್ಣ ವಿವರ.

500 ಹಾಗೂ 1000 ಮುಖಬೆಲೆಯ ನೋಟು ಬಂದ್ ಅವ್ಯವಸ್ಥೆ ವಿರೋಧಿಸಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಾರ್ಟಿ ಹಾಗೂ ಎಡಪಕ್ಷಗಳು ಆಕ್ರೊಶ್ ದಿವಸ್ ಭಾರತ್​​ ಬಂದ್​ಗೆ ಕರೆ ನೀಡಿವೆ. ಆದ್ರೆ, ಮೋದಿ ಬೆಂಬಲಿಗರು ಸೆಡ್ಡು ಹೊಡೆದಿದ್ದು ಸಂಭ್ರಮ ದಿವಸ್ ಅಂತ ಆಚರಣೆಗೆ ಮುಂದಾಗಿವೆ. ಹಾಗಿದ್ದರೆ ಆಕ್ರೋಶ್ ದಿವಸ್'​ಗೆ ಯಾರ್ಯಾರು​ ಬೆಂಬಲ ಕೊಡ್ತಾರೆ?

ಇವೆಲ್ಲಾ ಯಥಾಸ್ಥಿತಿ

- ಹಾಲು, ಪೇಪರ್​, ಆಸ್ಪತ್ರೆ, ಔಷಧಿ

- ರೈಲು ಸೇವೆ, ಮೆಟ್ರೋ ಸೇವೆ ಲಭ್ಯ

- ಬಿಎಂಟಿಸಿ ,ಕೆಎಸ್​ಆರ್​ಟಿಸಿ ಬಸ್​

- ಬೆಸ್ಕಾಂ, ಬಿಡಬ್ಲ್ಯೂಎಸ್​ಎಸ್​ಬಿ ಸೇವೆ

- ಎಂದಿನಂತೆ ಮಾರುಕಟ್ಟೆ ವಹಿವಾಟು

- ಶೂಟಿಂಗ್ ಇರುತ್ತೆ, ಥಿಯೇಟರ್ ಓಪನ್

- ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯ

- ಹೋಟೆಲ್​, ಬ್ಯಾಂಕ್​, ಅಂಚೆ ಕಚೇರಿ

- ಅಂಗಡಿ-ಮುಂಗಟ್ಟು ವಹಿವಾಟು ಸಲೀಸು

- ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ

- ಸರ್ಕಾರಿ ಕಚೇರಿ ಸೇವೆ ವ್ಯತ್ಯಯ ಇಲ್ಲ

ಇನ್ನು ಆಟೋ, ಕ್ಯಾಬ್​ಗಳು ಕೂಡ ಬಂದ್​ಗೆ ಬೆಂಬಲ ವ್ಯಕ್ತಪಡಿಸುತ್ತಿಲ್ಲ. ಎಂದಿನಂತೆ ಆಟೋ, ಕ್ಯಾಬ್'​ಗಳು ಓಡಾಡಲಿದ್ದು, ಮೋದಿ ನಿರ್ಧಾರಕ್ಕೆ ಬೆಂಬಲ ವ್ಯಕ್ತಡಿಸಿದ್ದಾರೆ.

ಇನ್ನೂ ಮಂಡ್ಯ, ಚಿತ್ರದುರ್ಗ , ಬಾಗಲಕೋಟೆ, ಯಾದಗಿರಿ,ದಾವಣಗೆರೆ, ರಾಯಚೂರು, ಕೊಡಗು, ಬೀದರ್, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಂದಿನಂತೆ ಶಾಲಾ-ಕಾಲೇಜುಗಳು ನಡೆಯಲಿವೆ. ಒಟ್ಟಿನಲ್ಲಿ ಆಕ್ರೋಶ್ ದಿವಸ್​ಗೆ ರಾಜ್ಯ ಸರ್ಕಾರವೇನೋ ಸಿದ್ಧತೆ ನಡೆಸ್ತಿದೆ. ಆದ್ರೆ, ಉಳಿದೆಲ್ಲಾ ಸಂಘಟನೆಗಳು ಮೋದಿ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಬಂದ್​ ಯಶಸ್ವಿಯಾಗುತ್ತಾ ಅನ್ನೊದನ್ನ ಕಾದು ನೋಡ್ಬೇಕು.