ಗಂಗಾವತಿ (ಏ. 30): ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಯುವಕನೋರ್ವ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೈಕ್ ಯಾತ್ರೆ ಕೈಗೊಂಡಿದ್ದು, ದಾರಿಯಲ್ಲಿ ಸಿಗುವ ದೇಗುಲಗಳಲ್ಲಿ ಮೋದಿ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಿದ್ದಾನೆ.

ಉತ್ತರ ಪ್ರದೇಶದ ಅಭಿಷೇಕ (35) ಬೈಕ್ ಯಾತ್ರೆ ಕೈಗೊಂಡಿರುವ ಯುವಕ. ಕಾಶ್ಮೀರದಿಂದ ಬೈಕ್ ಸವಾರಿ ಆರಂಭಿಸಿರುವ ಅಭಿಷೇಕ್ ಈಗಾಗಲೇ 20 ಸಾವಿರ ಕಿ. ಮೀ. ದೂರ ಕ್ರಮಿಸಿದ್ದಾರೆ. ಸೋಮವಾರ ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಅಂಜನಾದ್ರಿ ಪರ್ವತಕ್ಕೆ ಆಗಮಿಸಿ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದ ಅಭಿಷೇಕ್, ತಮ್ಮ ಬೈಕ್ ಯಾತ್ರೆಗೆ ಮೋದಿಯವರೇ ಚಾಲನೆ ನೀಡಿದ್ದರು ಎಂದರು.