ಭಾನುವಾರ ತಮ್ಮ ನರೇಂದ್ರ ಮೋದಿ ಮೊಬೈಲ್ ಆ್ಯಪ್‌ನಲ್ಲಿ ದೇಶದ ಜನರಿಗೆ ಹಲವು ಸಂದೇಶಗಳನ್ನು ನೀಡಿರುವ ಪ್ರಧಾನಿ ಮೋದಿ ‘125 ಕೋಟಿ ಜನರ ಶಕ್ತಿ ಮತ್ತು ಕೌಶಲ್ಯಗಳಿಂದ ಪ್ರಭಾವಿತವಾದ ಹೊಸ ಭಾರತ ಉದಯವಾಗುತ್ತಿದೆ. ಈ ಹೊಸ ಭಾರತ ಅಭಿವೃದ್ಧಿಯ ಪರವಾಗಿದೆ. 2022ರಲ್ಲಿ ದೇಶದ 75ನೇ ಸ್ವಾತಂತ್ರ್ಯ ಆಚರಣೆಯ ವೇಳೆ, ಭಾರತವನ್ನು ಗಾಂೀಜಿ, ಸರ್ದಾರ್ ಪಟೇಲ್ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಮ್ಮೆಪಡುವಂತೆ ನಾವು ಮಾಡಬೇಕು. ಹೊಸ ಭಾರತ ನಿರ್ಮಾಣಕ್ಕಾಗಿ ಜನರು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಮತ್ತು ಪ್ರತಿಜ್ಞೆ ಕೈಗೊಳ್ಳಬೇಕು’

ನವದೆಹಲಿ(ಮಾ.13): ಪಂಚರಾಜ್ಯಗಳ ಚುನಾವಣೆಯ ಭರ್ಜರಿ ಖುಷಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, 2022ರೊಳಗೆ ನವಭಾರತ ನಿರ್ಮಾಣದತ್ತ ಕೈಜೋಡಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ವಿಜಯ ಸಾಸಿದ ಬಳಿಕ ಇನ್ನಷ್ಟು ಆತ್ಮವಿಶ್ವಾಸದಿಂದ ಕಂಡು ಬಂದಿರುವ ಪ್ರಧಾನಿ ಮೋದಿ, 2019ರ ಲೋಕಸಭಾ ಚುನಾವಣೆಯ ನಂತರದ ದೃಷ್ಟಿಕೋನವನ್ನಿಟ್ಟುಕೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾನುವಾರ ತಮ್ಮ ನರೇಂದ್ರ ಮೋದಿ ಮೊಬೈಲ್ ಆ್ಯಪ್‌ನಲ್ಲಿ ದೇಶದ ಜನರಿಗೆ ಹಲವು ಸಂದೇಶಗಳನ್ನು ನೀಡಿರುವ ಪ್ರಧಾನಿ ಮೋದಿ ‘125 ಕೋಟಿ ಜನರ ಶಕ್ತಿ ಮತ್ತು ಕೌಶಲ್ಯಗಳಿಂದ ಪ್ರಭಾವಿತವಾದ ಹೊಸ ಭಾರತ ಉದಯವಾಗುತ್ತಿದೆ. ಈ ಹೊಸ ಭಾರತ ಅಭಿವೃದ್ಧಿಯ ಪರವಾಗಿದೆ. 2022ರಲ್ಲಿ ದೇಶದ 75ನೇ ಸ್ವಾತಂತ್ರ್ಯ ಆಚರಣೆಯ ವೇಳೆ, ಭಾರತವನ್ನು ಗಾಂೀಜಿ, ಸರ್ದಾರ್ ಪಟೇಲ್ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಮ್ಮೆಪಡುವಂತೆ ನಾವು ಮಾಡಬೇಕು. ಹೊಸ ಭಾರತ ನಿರ್ಮಾಣಕ್ಕಾಗಿ ಜನರು ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು ಮತ್ತು ಪ್ರತಿಜ್ಞೆ ಕೈಗೊಳ್ಳಬೇಕು’ ಎಂದು ಕರೆ ನೀಡಿದ್ದಾರೆ.

‘2022ರಲ್ಲಿ 75ನೇ ಸ್ವಾತಂತ್ರ್ಯ ಆಚರಣೆಯ ವೇಳೆ ಜೊತೆಯಾಗಿ, ನಾವು ನಮ್ಮ ಕನಸಿನ ಭಾರತವನ್ನು ನಿರ್ಮಿಸೋಣ. ಆಗ ಗಾಂೀಜಿ, ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್ ಹೆಮ್ಮೆ ಪಡುವ ಭಾರತವನ್ನು ನಾವು ಹೊಂದಬೇಕು’ ಎಂದು ಮೋದಿ ತಮ್ಮ ವೆಬ್‌ಸೈಟ್‌ನಲ್ಲಿ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿಯೊಬ್ಬ ಭಾರತೀಯ ನಾಗರಿಕನ ಶಕ್ತಿಯೊಂದಿಗೆ ಭಾರತ ಬದಲಾಗುತ್ತಿದೆ. ಸಂಶೋಧನೆ, ಕಠಿಣ ಶ್ರಮ, ಸೃಜನಶೀಲತೆ, ಶಾಂತಿ, ಸಹೋದರತೆ ಸಾಸುವತ್ತ ಬದಲಾಗುತ್ತಿದೆ. ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪು ಹಣ ಹಾಗೂ ಹೊಲಸು ಮುಕ್ತವಾಗಿ ಭಾರತ ಬದಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಯಾವೆಲ್ಲ ವಿಷಯಗಳಲ್ಲಿ ಜನತೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರ ಮುಕ್ತ ಭಾರತ ರೂಪಿಸುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕು. ಅದಕ್ಕಾಗಿ ನಗದು ರಹಿತ ವ್ಯವಹಾರ ನಡೆಸಬೇಕು. ಅಲ್ಲದೆ ಸ್ವಚ್ಛ ಭಾರತ ರೂಪಿಸುವ ಬದ್ಧತೆ ಮತ್ತು ಮಾದಕ ದ್ರವ್ಯಮುಕ್ತ ಭಾರತವನ್ನಾಗಿಸುವ ಗುರಿ ಹೊಂದಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಭಾರತೀಯರು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಬೆಂಬಲಿಸಬೇಕು. ಭಾರತ ಶಾಂತಿ, ಸೌಹಾರ್ಧತೆ ಮತ್ತು ಒಗ್ಗಟ್ಟಿನ ಪರವಾಗಿ ನಿಲ್ಲಬೇಕು. ಉದ್ಯೋಗ ನೀಡುವವರಾಗಬೇಕೇ ಹೊರತು, ಉದ್ಯೋಗ ಬೇಡುವವರಾಗಬಾರದು ಎಂದೂ ಅವರು ತಿಳಿಸಿದ್ದಾರೆ.