ಮತ್ತೊಂದು ಕಡೆ ಪ್ರಧಾನಿ ಮೋದಿ ಮತಬೇಟೆಗೆ ಇಳಿದು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಕರ್ನಾಟಕ ವಿಚಾರ ಪ್ರಸ್ತಾಪವಾಯಿತು.
ಪಂಜಾಬ್ನಲ್ಲಿ ಚುನಾವಣೆ ಪ್ರಚಾರದ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ. ಇವತ್ತು ಒಂದು ಕಡೆ ರಾಹುಲ್ಗಾಂಧಿ ಪ್ರಚಾರ ಆರಂಭಿಸಿದ್ದರೆ. ಮತ್ತೊಂದು ಕಡೆ ಪ್ರಧಾನಿ ಮೋದಿ ಮತಬೇಟೆಗೆ ಇಳಿದು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಕರ್ನಾಟಕ ವಿಚಾರ ಪ್ರಸ್ತಾಪವಾಯಿತು.
ಕಾಂಗ್ರೆಸ್ ಸರ್ಕಾರ ಇರೋ ಕರ್ನಾಟಕದಲ್ಲಿ ಸಚಿವರ ಮನೆಯಲ್ಲೇ ಕೋಟಿ ಕೋಟಿ ಕಪ್ಪು ಹಣ ಸಿಕ್ಕಿದೆ. ಆದರೆ, ಕಾಂಗ್ರೆಸ್ ಸರ್ಕಾರ ಮೌನವಾಗಿದೆ ಎಂದು ವಾಗ್ದಾಳಿ ನಡೆಸಿದರು. ಈ ಮಧ್ಯೆ ಎಎಪಿ ಕೂಡ ಪಂಜಾಬ್ನಲ್ಲಿ ಅಧಿಕಾರದ ಕನಸು ಕಾಣುತ್ತಿದ್ದು, ಭಾರೀ ಪ್ರಚಾರ ನಡೆಸುತ್ತಿದೆ. ಪಂಜಾಬ್ ಮತದಾರ ಫೆಬ್ರವರಿ 4ರಂದು ರಾಜಕೀಯ ಪಕ್ಷಗಳ ಹಣೆ ಬರಹ ಬರೆಯಲಿದ್ದಾನೆ.
