‘‘ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಫಕೀರ ಎಂದು ಕರೆದಿದ್ದಾರೆ. ಆದರೆ, ಅವರು ಫಕೀರರಲ್ಲ, ಅವರೇನೂ ನಿರ್ಗತಿಕರಾಗಿಲ್ಲ, ಆದರೆ ಮೋದಿ ನಿರ್ಧಾರ ದೇಶದ ಶೇಕಡಾ 90ರಷ್ಟು ಜನರನ್ನು ಫಕೀರರನ್ನಾಗಿಸಿದೆ,’’

ನವದೆಹಲಿ(ಡಿ.06): ‘‘ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ನಿರ್ಧಾರದಿಂದ ದೇಶದ ಶೇಕಡಾ 90ರಷ್ಟು ಮಂದಿ ಫಕೀರ (ಬಡವ)ರಾಗಿದ್ದಾರೆಯೇ ವಿನಾ ಮೋದಿಯವರು ಫಕೀರರಾಗಿಲ್ಲ,’’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.

ಡಾ. ಬಿ ಆರ್ ಅಂಬೇಡ್ಕರ್‌'ರವರ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಫಕೀರ ಎಂದು ಕರೆದಿದ್ದಾರೆ. ಆದರೆ, ಅವರು ಫಕೀರರಲ್ಲ, ಅವರೇನೂ ನಿರ್ಗತಿಕರಾಗಿಲ್ಲ, ಆದರೆ ಮೋದಿ ನಿರ್ಧಾರ ದೇಶದ ಶೇಕಡಾ 90ರಷ್ಟು ಜನರನ್ನು ಫಕೀರರನ್ನಾಗಿಸಿದೆ,’’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘‘ಮಾಯಾವತಿ ಈ ಹೇಳಿಕೆ ರಾಜಕೀಯ ಪ್ರೇರಿತ. ಬಿಎಸ್‌ಪಿ ಭ್ರಷ್ಟಾಚಾರದ ಆರೋಪ ಹೊತ್ತ ಪಕ್ಷ. ಮಾಯಾವತಿ ಅವರೂ ದಲಿತರು ಹಾಗೂ ಬಡವರ ಹೆಸರಲ್ಲಿ ಅಕ್ರಮವಾಗಿ ಹಣ ಗಳಿಕೆ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ,’’ ಎಂದಿದೆ.