ರಾತ್ರೋ ರಾತ್ರಿ ಕಳ್ಳ  ಖಜಾನೆ ಮೇಲೆ ದಾಳಿನೋಟ್​ ಬ್ಯಾನ್​ ಆಗಿದ್ದು ಆಯ್ತು. ಜನರ ಸಂಕಷ್ಟಗಳು ಅಂತ್ಯಗೊಂಡಿದ್ದೂ ಆಯ್ತು. ಮೋದಿಯ ನೋಟ್​ ಬ್ಯಾನ್​ ಅಸ್ತ್ರಕ್ಕೆ ಹಲವಾರು ಮಂದಿ ಸಿಕ್ಕಿಕೊಂಡಿದ್ರು. ರಾತ್ರೋ ರಾತ್ರಿ ಕಾಳಧನಿಕರ ಕಳ್ಳ ಖಜಾನೆ ಮೇಲೆ ದಾಳಿ ನಡೆಸಲಾಗಿತ್ತು. ಕಂತೆ ಕಂತೆ ನೋಟ್​ಗಳನ್ನ ವಶಕ್ಕೆ ಪಡೆಯಲಾಗಿತ್ತು. ನೋಟ್​​ ಬ್ಯಾನ್​ನಿಂದ ದೊಡ್ಡ ದೊಡ್ಡ ಕುಳಗಳೇ ಸಿಕ್ಕಾಕೊಂಡಿದ್ವು. ತಮಿಳುನಾಡಿನಲ್ಲಿ ಸರ್ಕಾರದ ಕಾರ್ಯದರ್ಶಿಯೇ ತಗಲಾಕೊಂಡಿದ್ದ. ಲೆಕ್ಕವಿಲ್ಲದಷ್ಟು ರಾಶಿ ರಾಶಿ ಹಣದೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಾಕೊಂಡಿದ್ದ.ಇನ್ನು ಕರ್ನಾಟಕದಲ್ಲೂ ಕಳ್ಳ ಖಜಾನೆ ಸಿಕ್ಕಿತ್ತು. ಹಲವು ಪ್ರಭಾವಿ ವ್ಯಕ್ತಿಗಳು ನೋಟಿನ ಖಜಾನೆಯೊಂದಿಗೆ ತಗಲಾಕೊಂಡಿದ್ರು. ಸಿನಿಮಾ ನಟರಿಗೂ, ಆಡಳಿತ ಪಕ್ಷದ ನಾಯಕರಿಗೂ ಕಳ್ಳ ಖಜಾನೆಯ ನಂಟು ಅಂಟಿಕೊಂಡಿತ್ತು. ಹೀಗೆ ನೋಟ್​ ಬ್ಯಾನ್​ನಿಂದ ಇಡೀ ದೇಶಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದ ಮೋದಿ, ಸ್ವಲ್ಪ ಗ್ಯಾಪ್ ಕೊಟ್ಟಿದ್ರು. ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡುವ ನಿಟ್ಟಿನಲ್ಲಿ ತಮ್ಮ ಶ್ರಮವನ್ನ ಹಾಕಿದ್ರು. ಈಗ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲಾಗಿದೆ. ಜಾಧವ್​ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಾಗಿದೆ.

ನರೇಂದ್ರ ಮೋದಿ ಮತ್ತೊಂದು ಮಹಾ ಅಸ್ತ್ರವನ್ನ ಹಿಡಿದು ಸಜ್ಜಾಗಿದ್ದಾರೆ. ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದ ಮೋದಿ ಇದೀಗ ಮತ್ತೊಂದು ಸುತ್ತಿನ ಬೇಟೆಗೆ ಸಿದ್ಧರಾಗಿದ್ದಾರೆ. ಈ ಸಲ ಮೋದಿ ಬೀಸ್ತಾ ಇರೋದು ಸಣ್ಣ ಪುಟ್ಟ ಅಸ್ತ್ರ ಅಲ್ಲ. ಪವರ್​​ಫುಲ್​ ಅಸ್ತ್ರ.

ಕಳೆದ ವರ್ಷ ನವೆಂಬರ್​ 8ನೇ ತಾರೀಕು ಮೋದಿ ಇಡೀ ದೇಶದ ಜನರಿಗೆ ಶಾಕ್​ ಕೊಟ್ಟಿದ್ರು. ರಾತ್ರೋ ರಾತ್ರಿ ನೋಟ್​ ಬ್ಯಾನ್​ ಮಾಡೋ ಮೂಲಕ, ಕಾಳಧನಿಕರ ನಿದ್ದೆಗೆಡಿಸಿದ್ರು. ಇನ್ನೇನು ನಿದ್ದೆಗೆ ಜಾರಬೇಕು ಅಂದುಕೊಂಡಿದ್ದವರು ನಿದ್ದೇನೇ ಮಾಡದಂತೆ ಮಾಡಿದ್ರು. ಇಡೀ ಭಾರತದಾದ್ಯಂತ ಮಿಂಚಿನ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿ.

ಮೋದಿ ನೋಟ್​ ಬ್ಯಾನ್​ ಮಾಡಿದ್ದು ಹಳೇ ವಿಷ್ಯ. ಅದರಿಂದ ಜನರು ಸಂಕಷ್ಟಗಳನ್ನು ಅನುಭವಿಸಿದ್ದೂ ಹಳೇ ವಿಷ್ಯ. ನೋಟ್​ ಬ್ಯಾನ್​ನಿಂದ ಜನ ಸಾಮಾನ್ಯರು ತತ್ತರಿಸಿದ್ರು. ಆದರೂ ಮೋದಿಗೋಸ್ಕರ ಎಲ್ಲವನ್ನೂ ತಡ್ಕೊಂಡಿದ್ರು. ಕಷ್ಟ ಆಗ್ತಿದೆ ಅಂತ ಗೊತ್ತಿದ್ರೂ, ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿದ್ರು ಜನ. ಆವತ್ತು ಎಟಿಎಂಗಳ ಮುಂದೆ ಕ್ಯೂನಿಂತ ಜನರಿಗೆಲ್ಲಾ ಅನ್ನಿಸಿದ್ದು ಒಂದೇ. ಮೋದಿ ಏನೋ ಮಾಡ್ತಿದ್ದಾರೆ. ಬದಲಾವಣೆ ಮಾಡ್ತಿರುವಾಗ ಸಂಕಷ್ಟಗಳೆಲ್ಲಾ ಸಾಮಾನ್ಯ. ನಾವು ಇದನ್ನ ಸಹಿಸಿಕೊಳ್ತೀವಿ ಅಂದಿದ್ರು ಜನ. ಅಚ್ಛೇದಿನಗಳು ಬರಬಹುದು. ಭ್ರಷ್ಟರು ನೆಲಕ್ಕಚ್ಚಬಹುದು. ದೇಶಕ್ಕೆ ಒಳ್ಳೇದಾಗಬಹುದು. ಮುಂದಿನ ಪೀಳಿಗೆಗೆ ಒಳ್ಳೇದಾಗಬಹುದು ಅನ್ನೋ ಆಶಾಭಾವನೆಯಿಂದ, ಎಲ್ಲವನ್ನೂ ಸಹಿಸಿಕೊಂಡು ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿದ್ರು ಜನ.

ರಾತ್ರೋ ರಾತ್ರಿ ಕಳ್ಳ ಖಜಾನೆ ಮೇಲೆ ದಾಳಿ

ನೋಟ್​ ಬ್ಯಾನ್​ ಆಗಿದ್ದು ಆಯ್ತು. ಜನರ ಸಂಕಷ್ಟಗಳು ಅಂತ್ಯಗೊಂಡಿದ್ದೂ ಆಯ್ತು. ಮೋದಿಯ ನೋಟ್​ ಬ್ಯಾನ್​ ಅಸ್ತ್ರಕ್ಕೆ ಹಲವಾರು ಮಂದಿ ಸಿಕ್ಕಿಕೊಂಡಿದ್ರು. ರಾತ್ರೋ ರಾತ್ರಿ ಕಾಳಧನಿಕರ ಕಳ್ಳ ಖಜಾನೆ ಮೇಲೆ ದಾಳಿ ನಡೆಸಲಾಗಿತ್ತು. ಕಂತೆ ಕಂತೆ ನೋಟ್​ಗಳನ್ನ ವಶಕ್ಕೆ ಪಡೆಯಲಾಗಿತ್ತು. ನೋಟ್​​ ಬ್ಯಾನ್​ನಿಂದ ದೊಡ್ಡ ದೊಡ್ಡ ಕುಳಗಳೇ ಸಿಕ್ಕಾಕೊಂಡಿದ್ವು. ತಮಿಳುನಾಡಿನಲ್ಲಿ ಸರ್ಕಾರದ ಕಾರ್ಯದರ್ಶಿಯೇ ತಗಲಾಕೊಂಡಿದ್ದ. ಲೆಕ್ಕವಿಲ್ಲದಷ್ಟು ರಾಶಿ ರಾಶಿ ಹಣದೊಂದಿಗೆ ರೆಡ್ ಹ್ಯಾಂಡಾಗಿ ಸಿಕ್ಕಾಕೊಂಡಿದ್ದ.

ಇನ್ನು ಕರ್ನಾಟಕದಲ್ಲೂ ಕಳ್ಳ ಖಜಾನೆ ಸಿಕ್ಕಿತ್ತು. ಹಲವು ಪ್ರಭಾವಿ ವ್ಯಕ್ತಿಗಳು ನೋಟಿನ ಖಜಾನೆಯೊಂದಿಗೆ ತಗಲಾಕೊಂಡಿದ್ರು. ಸಿನಿಮಾ ನಟರಿಗೂ, ಆಡಳಿತ ಪಕ್ಷದ ನಾಯಕರಿಗೂ ಕಳ್ಳ ಖಜಾನೆಯ ನಂಟು ಅಂಟಿಕೊಂಡಿತ್ತು. ಹೀಗೆ ನೋಟ್​ ಬ್ಯಾನ್​ನಿಂದ ಇಡೀ ದೇಶಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದ ಮೋದಿ, ಸ್ವಲ್ಪ ಗ್ಯಾಪ್ ಕೊಟ್ಟಿದ್ರು. ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡುವ ನಿಟ್ಟಿನಲ್ಲಿ ತಮ್ಮ ಶ್ರಮವನ್ನ ಹಾಕಿದ್ರು. ಈಗ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲಾಗಿದೆ. ಜಾಧವ್​ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಾಗಿದೆ.

ಮತ್ತೊಮ್ಮೆ ಬ್ಯಾನ್

ಪಾಕಿಸ್ತಾನದ ನವಾಜ್ ಷರೀಫ್​ ಅಂತೂ, ಕುಂತಲ್ಲೆ ಗಡ ಗಡ ಅಂತ ನಡುಗುವಂತಾಗಿದೆ.ಯಾಕಪ್ಪಾ ಭಾರತವನ್ನ ಎದುರಾಕೊಂಡೆ ಅನ್ನೋ ಮಟ್ಟಿಗೆ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪಾಕ್ ​ ಕಡೆ ಗಮನ ಹರಿಸಿದ್ದ ಮೋದಿ ಈಗ ಮತ್ತೆ ತಮ್ಮ ದೃಷ್ಟಿಯನ್ನ ಭ್ರಷ್ಟರ ಮೇಲೆ ನೆಟ್ಟಿದ್ದಾರೆ. ಮತ್ತೊಮ್ಮೆ ನೋಟ್​ ಬ್ಯಾನ್​​ ಅಸ್ತ್ರವನ್ನ ಕೈಗೆತ್ತಿಕೊಳ್ಳೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಒಂದು ವೇಳೆ ಈ ಬಾರಿ ಏನಾದ್ರೂ ನೋಟ್​ ಬ್ಯಾನ್ ಮಾಡಿದ್ದೇ ಆದ್ರೆ, ಅದರ ಎಫೆಕ್ಟ್​ ದೊಡ್ಡ ಮಟ್ಟದಲ್ಲಿ ಇರಲಿದೆ ಅಂತ ಹೇಳಲಾಗ್ತಿದೆ. ಮುಂದಿನ ನೋಟ್​ ಬ್ಯಾನ್​​ನಲ್ಲಿ ಮೋದಿ ಬ್ಯಾನ್​ ಮಾಡೋದಕ್ಕೆ ಹೊರಟಿರೋದು ಏನನ್ನ ಗೊತ್ತಾ? ದುಬಾರಿ ಬೆಲೆಯ ನೋಟ್​​ಗಳನ್ನ. ಅಂದ್ರೆ 2000 ಮುಖಬೆಲೆಯ ಕರೆಸನ್ಸಿಯನ್ನ.

ನೋಟ್​ ಬ್ಯಾನ್​ ಬಳಿಕ ಸಾಕಷ್ಟು ಮಂದಿ ಭ್ರಷ್ಟರು ತಗಲಾಕೊಂಡಿದ್ದಾರೆ. ಅವರೆಲ್ಲರ ಬಳಿ ಸಿಕ್ಕಿದ್ದು ಹೊಸ ನೋಟ್​ಗಳೆ. ಹಳೆ ನೋಟ್​​ಗಳ ಜೊತೆಗೆ ಹೊಸ ನೋಟ್​ಗಳನ್ನೂ ಖದೀಮರು ಸಂಗ್ರಹಿಸಿ ಇಟ್ಟಿದ್ದು ಗೊತ್ತಾಗಿದೆ. ಹೀಗಾಗಿ ದುಬಾರಿ ಮುಖಬೆಲೆಯ ನೋಟ್​ಗಳನ್ನ ಬ್ಯಾನ್ ಮಾಡೋ ಸಾಧ್ಯತೆ ಇದೆ ಅಂತ ಅಂದಾಜಿಸಲಾಗಿದೆ. ಇದರಿಂದ 2 ಸಾವಿರ ಮುಖಬೆಲೆಯ ನೋಟ್​ಗಳನ್ನ ತಮ್ಮ ಖಜಾನೆಯಲ್ಲಿ ತುಂಬಿಟ್ಟುಕೊಂಡಿದ್ದ ಕಾಳಧನಿಕರಿಗೆ ಮತ್ತೊಮ್ಮೆ ದೊಡ್ಡ ಹೊಡೆತ ನೀಡಲಿದ್ದಾರೆ ಮೋದಿ.

ಶ್ರೀಮಂತರ ಮೇಲೆ ಕಣ್ಣು ?

ಮತ್ತೊಂದ್ಸಲ ನೋಟ್​ ಬ್ಯಾನ್​ ಮಾಡಿದ್ರೆ, 2 ಸಾವಿರ ಮುಖಬೆಲೆಯ ನೋಟ್​ಗಳು ಕಣ್ಮರೆಯಾಗಲಿವೆ ಅನ್ನೋ ಮಾತುಗಳೂ ಕೇಳಿ ಬಂದಿವೆ, ಇದು ಕಳ್ಳ ಖಜಾನೆಯ ಶ್ರೀಮಂತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ. ಇದರ ಜೊತೆಗೆ ಮೋದಿ ಮತ್ತೊಂದು ಅಸ್ತ್ರವನ್ನೂ ರೆಡಿ ಮಾಡಿಕೊಂಡಿದ್ದಾರೆ. ಆ ಅಸ್ತ್ರ ಜನ ಸಾಮಾನ್ಯರನ್ನೂ ಸಂಕಷ್ಟಕ್ಕೆ ಈಡು ಮಾಡಲಿದೆ. ಅಷ್ಟಕ್ಕೂ ಜನಸಾಮಾನ್ಯರ ಮೇಲೆ ಮೋದಿ ಪ್ರಯೋಗಿಸಲು ಹೊರಟಿರುವ ಅಸ್ತ್ರ ಯಾವುದು ಗೊತ್ತಾ? ಶ್ರೀಸಾಮಾನ್ಯರ ಜೇಬುಗಳಲ್ಲಿನ ಕಾಯಿನ್​ಗಳನ್ನ ಬಂದ್ ಮಾಡೋದು.

ಮೋದಿ ಕಣ್ಣು ಇದೀಗ ಜನರ ಜೇಬಿನ ಮೇಲೆ ಬಿದ್ದಿದೆ. ಜನರ ಜೇಬಿನಲ್ಲಿರೋ ಕಾಯಿನ್​ಗಳ ಮೇಲೆ ಬಿದ್ದಿದೆ. ಶ್ರೀಸಾಮಾನ್ಯರ ಜೇಬಿನಲ್ಲಿರೋ ಕಾಯಿನ್​ಗಳನ್ನ ಬಂದ್ ಮಾಡಲು ಚಿಂತನೆ ನಡೆದಿದೆ ಅಂತ ಹೇಳಲಾಗುತ್ತಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ತಂಡ ಸಜ್ಜಾಗಿದೆ ಅನ್ನೋ ಮಾತುಗಳೂ ಕೇಳಿ ಬಂದಿವೆ. ಎರಡನೇ ಸಲ ನೋಟ್​ ಬ್ಯಾನ್ ಮಾಡುವಾಗ, ಕಾಯಿನ್​ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ ಅನ್ನೋ ಮಾತುಗಳಿವೆ. ಒಂದು ವೇಳೆ ಇದು ನಿಜವಾಗಿದ್ದೇ ಆದ್ರೆ, 10 ರೂಪಾಯಿಯ ಕಾಯಿನ್​ಗಳು, 5 ರೂಪಾಯಿಯ ನಾಣ್ಯಗಳು, 2 ರೂಪಾಯಿ, 1 ರೂಪಾಯಿ ಕಾಯಿನ್​ಗಳು ನಿಷೇಧವಾಗಲಿವೆ. ನಿಮ್ಮ ಮನೆಯಲ್ಲಿರೋ ನಿಮ್ಮ ಜೆಬಿನಲ್ಲಿರೋ ಎಲ್ಲಾ ಕಾಯಿನ್​ಗಳು ಬ್ಯಾನ್ ಅಗಲಿವೆ. ಅವುಗಳಿಗೆ ಕವಡೆ ಕಾಸಿನ ಕಿಮ್ಮ್ತೂ ಇರೋದಿಲ್ಲ.

ಮೋದಿ ಹಳೆಯ ನೋಟ್​ಗಳನ್ನ ಬ್ಯಾನ್ ಮಾಡಿದ್ರು. 2 ಸಾವಿರ ಮುಖ ಬೆಲೆಯ ನೊಟ್​ಗಳನ್ನ ಜಾರಿಗೆ ತಂದಿದ್ರು. ಈಗ ಕಾಯಿನ್​ಗಳನ್ನ ಬ್ಯಾನ್ ಮಾಡ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ.

ಮೋದಿ ಕಣ್ಣು ಕಾಯಿನ್​ಗಳ ಮೇಲೆ ಬಿದ್ದಿದ್ಯಾಕೆ?

ಈಗ ತಾನೇ ಜನರು ನೋಟ್​ ಬ್ಯಾನ್​​ ಎಫೆಕ್ಟ್​ನಿಂದ ಸುಧಾರಿಸಿಕೊಂಡಿದ್ದಾರೆ. ಹೀಗಿರಬೆಕಾದ್ರೇನೇ ಮೋದಿ ಮತ್ತೊಂದು ಸುತ್ತಿನ ನೋಟ್​ ಬ್ಯಾನ್​​ಗೆ ಸಿದ್ಧತೆ ನಡೆಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಬಾರಿ ಮೋದಿ ಕಣ್ಣು ಬಿದ್ದಿರೋದು ನೋಟ್​​ಗಳ ಮೇಲಲ್ಲ, ಬದಲಿಗೆ ಕಾಯಿನ್​ಗಳ ಮೇಲೆ.

ನಾಣ್ಯಗಳನ್ನು ಟಂಕಿಸಲು ಹೆಚ್ಚು ಖರ್ಚಾಗುತ್ತೆ

1 ನಾಣ್ಯ ಟಂಕಿಸುವ ಖರ್ಚಿನಲ್ಲಿ 6 ನೋಟ್​ಗಳನ್ನ ಮುದ್ರಿಸಬಹುದು. ಇದು ಎರಡನೇ ಸುತ್ತಿನ ನೋಟ್​ ಬ್ಯಾನ್​ ಹಿಂದಿನ ಸತ್ಯ. ಮೋದಿ ಮತ್ತು ತಂಡ ಎರಡನೇ ಸುತ್ತಿನ ನೋಟ್​ ಬ್ಯಾನ್​​ ಮಾಡೋದಕ್ಕೆ ಸಿದ್ಧರಾಗಿದ್ದು ಇದೇ ಕಾರಣಕ್ಕೆ. ನಾಣ್ಯಗಳನ್ನ ಟಂಕಿಸೋದಕ್ಕೆ ಹೆಚ್ಚು ಖರ್ಚಾಗುತ್ತೆ. ನೋಟ್​ಗಳನ್ನ ಮುದ್ರಿಸೋದಕ್ಕೆ ಕಡಿಮೆ ವೆಚ್ಚ ತಗುಲುತ್ತೆ. ಒಂದು ನಾಣ್ಯವನ್ನ ಟಂಕಿಸೋ ಖರ್ಚಿನಲ್ಲಿ 6 ನೋಟ್​ಗಳನ್ನ ಮುದ್ರಿಸಬಹುದಾಗಿದೆ. ಹೀಗಾಗಿ ನಾಣ್ಯಗಳನ್ನ ಬ್ಯಾನ್ ಮಾಡಿ, ಕಡಿಮೆ ಖರ್ಚಿನಲ್ಲಿ ನೋಟ್​ಗಳನ್ನು ಮುದ್ರಿಸಬೇಕು ಅನ್ನುವ ಆಲೋಚನೆಯಲ್ಲಿ ಇದೆಯಂತೆ ಕೇಂದ್ರ ಸರ್ಕಾರ.

10 ರೂ ನಾಣ್ಯ ಟಂಕಿಸಲು 6.10 ರೂಪಾಯಿ ಖರ್ಚು, 10 ರೂ. ನೋಟ್​ ಮುದ್ರಿಸಲು 94 ಪೈಸೆ ವೆಚ್ಚ

10 ರೂ. ನಾಣ್ಯವನ್ನ ಟಂಕಿಸೋದಕ್ಕೆ 6.10 ರೂಪಾಯಿ ವೆಚ್ಚವಾಗುತ್ತೆ. ಆದರೆ ಅದೇ 10 ರೂಪಾಯಿ ನೋಟ್​​ ಅನ್ನ ಪ್ರಿಂಟ್ ಮಾಡೋದಕ್ಕೆ ಬರೀ 94 ಪೈಸೆ ವೆಚ್ಚವಾಗುತ್ತೆ. ಇಷ್ಟೇ ಅಲ್ಲ. 1 ರೂಪಾಯಿ, 2 ರೂಪಾಯಿ, 5 ರೂಪಾಯಿ ಹೀಗೆ ಎಲ್ಲಾ ನಾಣ್ಯಗಳನ್ನು ಟಂಕಿಸೋದಕ್ಕೂ ಹೆಚ್ಚು ಹಣ ವೆಚ್ಚವಾಗುತ್ತಿದೆ. ಹೀಗಾಗಿ ಕಾಯಿನ್​ಗಳನ್ನ ಬ್ಯಾನ್​ ಮಾಡಿ, ನೋಟ್​ಗಳ ಮುದ್ರಣ ಹೆಚ್ಚಿಸಬೇಕು ಅನ್ನೋ ಆಲೋಚನೆ ಕೆಂದ್ರ ಸರ್ಕಾರಕ್ಕೆ ಇದೆ ಅನ್ನೋ ಸುದ್ದಿ ಇದೆ. ಒಂದು ಇದು ನಿಜವೇ ಆಗಿದ್ರೆ ದೇಶಾದ್ಯಂತ ಕಾಯಿನ್​ಗಳು ನಾಪತ್ತೆಯಾಗಲಿವೆ.

ನೋಟ್​​ಗಳ ಮುದ್ರಣ ವೆಚ್ಚ

10 ರೂ. ನೋಟ್​ - 94 ಪೈಸೆ

20 ರೂ. ನೋಟ್​ - 1.16 ರೂ.

50 ರೂ. ನೋಟ್​​ - 1.65 ರೂ.

100 ರೂ. ನೋಟ್ - 1.70 ರೂ.

500 ರೂ. ನೋಟ್ - 2.90 ರೂ.

2000 ರೂ. ನೋಟ್ - 3.80 ರೂ.

10 ರೂಪಾಯಿಯ ಒಂದು ನಾಣ್ಯ ಟಂಕಿಸೋದಕ್ಕೆ 6.10 ರೂ ತಗುಲುತ್ತೆ. ಈ ವೆಚ್ಚದಲ್ಲಿ 2 ಸಾವಿರ ಮುಖಬೆಲೆಯ 2 ನೋಟ್​ಗಳನ್ನ ಪ್ರಿಂಟ್ ಮಾಡಬಹುದಾಗಿದೆ. ನಾಣ್ಯಗಳನ್ನು ಮುದ್ರಿಸೋದಕ್ಕೆ ಹೆಚ್ಚು ವೆಚ್ಚ ಆಗ್ತಿರೋದ್ರಿಂದ ನಾಣ್ಯಗಳನ್ನ ಬ್ಯಾನ್ ಮಾಡಿ ನೋಟ್​ಗಳನ್ನೇ ಚಲಾವಣೆಗೆ ತರೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ನಾಣ್ಯಗಳನ್ನ ಬ್ಯಾನ್ ಮಾಡಬಹುದು. ನೋಟ್​ಗಳನ್ನೂ ಚಲಾವಣೆಗೆ ತರಬಹುದು. ಇದರಿಂದ ಸರ್ಕಾರಕ್ಕೆ ಆಗ್ತಿರೋ ಆರ್ಥಿಕ ಹೊರೆಯನ್ನೂ ತಗ್ಗಿಸಬಹುದು. ಆದರೂ ಈ ನಾಣ್ಯಗಳನ್ನ ಬ್ಯಾನ್ ಮಾಡೋ ನಿರ್ಧಾರ ತಗೊಳ್ಳೋದಕ್ಕೆ ಮೋದಿಯಿಂದ ಸಾಧ್ಯವಾಗ್ತಿಲ್ಲ.

ನಾಣ್ಯಗಳನ್ನ ಟಂಕಿಸೋದಕ್ಕೆ ಹೆಚ್ಚು ವೆಚ್ಚವಾಗುತ್ತೆ. ನಾಣ್ಯಗಳ ಬದಲಿಗೆ ನೋಟ್​ಗಳನ್ನ ಮುದ್ರಿಸೋದ್ರಿಂದ, ಸರ್ಕಾರಕ್ಕೆ ಆಗೋ ಆರ್ಥಿಕ ಹೊರೆಯನ್ನ ಇಳಿಸಬಹುದಾಗಿದೆ. ಇಷ್ಟೇ ಅಲ್ಲ. ಬ್ಯಾಂಕ್​​ಗಳಲ್ಲಿ ನಾಣ್ಯಗಳನ್ನ ಶೇಖರಿಸಿ ಇಡೋದಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗುತ್ತೆ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ನಾಣ್ಯಗಳನ್ನ ಕೆಲ ಬ್ಯಾಂಕ್​ಗಳು ತೆಗೆದುಕೊಂಡಿರಲಿಲ್ಲ. ಆದರೆ ರಿಸರ್ವ್ ಬ್ಯಾಂಕ್ ಖಡಕ್ ವಾರ್ನಿಂಗ್ ಮಾಡಿದ್ರಿಂದ 10 ರೂ ನಾಣ್ಯಗಳನ್ನು ಬ್ಯಾಂಕ್​ಗಳು ಸ್ವೀಕರಿಸುವಂತಾಗಿದೆ. ಈ ನಾಣ್ಯಗಳನ್ನ ಶೇಖರಿಸಿ ಇಡೋದಕ್ಕೆ ಸ್ಥಳಾವಕಾಶದ್ದೇ ಸಮಸ್ಯೆ. ಆದರೆ ನೋಟ್​ಗಳಾದ್ರೆ ಈ ಸಮಸ್ಯೆ ಇರಲ್ಲ. ಇಷ್ಟೆಲ್ಲಾ ಅಂಶಗಳಿದ್ದರೂ ನಾಣ್ಯಗಳನ್ನ ಬ್ಯಾನ್ ಮಾಡಿ, ಸಂಪೂರ್ಣವಾಗಿ ನೋಟ್​ಗಳನ್ನ ಚಲಾವಣೆಗೆ ತರಲು ಸಾಧ್ಯವಾಗ್ತಿಲ್ಲ. ಇದಕ್ಕೆ ಕಾರಣವೂ ಇದೆ.

ಹರಿದ ನೋಟ್​​ಗಳನ್ನು ಮರು ಮುದ್ರಿಸುವುದೇ ಹೆಚ್ಚು ವೆಚ್ಚ

ಒಂದ್ಸಲ ನಾಣ್ಯವನ್ನ ಟಂಕಿಸಿದ್ರೆ, ಅದು ವರ್ಷಾನು ವರ್ಷ ಬಾಳಿಕೆ ಬರುತ್ತೆ. ಆದರೆ ನೋಟ್​ಗಳ ಆಯಸ್ಸು 9 ರಿಂದ 10 ತಿಂಗಳು ಮಾತ್ರ. ಪ್ರತೀವರ್ಷ ಹರಿದ ನೋಟ್​ಗಳ ಬದಲಿಗೆ ಹೊಸ ನೋಟ್​ಗಳನ್ನ ಮುದ್ರಿಸೋದೇ ಸಮಸ್ಯೆ. ಪ್ರತೀವರ್ಷ ಹೊಸ ಹೊಸ ನೋಟ್​ಗಳನ್ನ ಮುದ್ರಿಸೋದ್ರಿಂದ, ಕೋಟಿ ಕೋಟಿ ಆರ್ಥಿಕ ಹೊರೆ ಬೀಳುತ್ತಿದೆ. ಹೀಗಾಗಿ ನೋಟ್​ಗಳ ಬದಲಿಗೆ ಒಂದ್ಸಲ ನಾಣ್ಯವನ್ನ ಟಂಕಿಸೋದೇ ಮಿತವ್ಯಯಕಾರಿಯಾಗಿದೆ ಅಂತಾರೆ ಆರ್ಥಿಕ ತಜ್ಞರು. ಹೀಗಾಗಿ ನಾಣ್ಯಗಳು ಇಂದಿಗೂ ಚಲಾವಣೆಯಲ್ಲಿವೆ.

ನಾಣ್ಯಗಳನ್ನ ಬ್ಯಾನ್ ಮಾಡಬೇಕು. ನೋಟ್​ಗಳನ್ನೇ ಚಲಾವಣೆಗೆ ತರಬೇಕು ಅನ್ನೋ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇದ್ದಿರಬಹುದು. ಆದರೆ ನಾಣ್ಯಗಳ ಬಾಳಿಕೆ ಮತ್ತು ನೋಟ್​ಗಳ ಆಯಸ್ಸನ್ನ ತುಲನೆ ಮಾಡಿದ್ರೆ, ನಾಣ್ಯಗಳೇ ಬೆಟರ್​ ಅಂತ ಅನ್ನಿಸ್ತಿದೆ. ಹೀಗಾಗಿ ನಾಣ್ಯಗಳನ್ನ ಬ್ಯಾನ್ ಮಾಡೋ ಗೋಜಿಗೇ ಹೋಗ್ತಿಲ್ಲ ಕೇಂದ್ರ ಸರ್ಕಾರ. ನೋಟ್​ಗಳನ್ನು ಮುದ್ರಿಸೋದಕ್ಕೆ ಕಡಿಮೆ ಖರ್ಚಾಗಬಹುದು. ಆದರೆ ಅವುಗಳು ನಾಣ್ಯಗಳ ಥರ ಹೆಚ್ಚು ವರ್ಷ ಬಾಳಿಕೆ ಬರೋದಿಲ್ಲ. ಹೀಗಾಗಿ ಸರ್ಕಾರ ಸುಮ್ಮನಾಗಿದೆ ಅನ್ನೋದು ಹಲವರ ಮಾತು.

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್