ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇದೇ ಮೇ 30 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಇದಾದ ಬಳಿಕ ಮೊದಲ ವಿದೇಶ ಪ್ರವಾಸಲ್ಲೆ ಪ್ಲಾನ್ ಮಾಡಿದ್ದಾರೆ. 

ನವದೆಹಲಿ: ಇದೇ ಮೇ 30 ರಂದು 2 ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರ ಮೊದಲ ವಿದೇಶ ಯಾತ್ರೆ ಬಹುತೇಕ ಅಂತಿಮಗೊಂಡಿದೆ. 

ಮೂಲಗಳ ಪ್ರಕಾರ, ನರೇಂದ್ರ ಮೋದಿ ಅವರು ಜೂನ್ ಮೊದಲ ವಾರದಲ್ಲಿ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲಿದ್ದು, ಅದು ಅವರ 2 ನೇ ಇನಿಂಗ್ಸ್‌ನ ಮೊದಲ ವಿದೇಶ ಪ್ರವಾಸವಾಗಿರಲಿದೆ. 

ಈ ಭೇಟಿ ಅವಧಿಯಲ್ಲಿ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಸಂಬಂಧ ಸುಧಾರಣೆ ಬಗ್ಗೆ ವಿಸ್ತೃತ ಮಾತುಕತೆ ನಡೆಸುವ ಸಾಧ್ಯತೆ ಇದೆ. ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಮೋದಿ 59 ದೇಶಗಳಿಗೆ ಭೇಟಿ ಕೊಟ್ಟಿದ್ದರು. ಆಗ ಅವರು ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಭೂತಾನ್‌ಗೆ ಕೈಗೊಂಡಿದ್ದರು.