ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘1+1=11’ ಮಂತ್ರ ಪಠಿಸಿದ್ದಾರೆ

ಅಹ್ಮದಾಬಾದ್: ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘1+1=11’ ಮಂತ್ರ ಪಠಿಸಿದ್ದಾರೆ.

Add Asianetnews Kannada as a Preferred SourcegooglePreferred

ಚುನಾವಣಾ ಪ್ರಚಾರದ ಕೊನೆಯ ದಿವಸ ಮಾತನಾಡಿದ ಮೋದಿ, ‘ಗುಜರಾತ್ ಸರ್ಕಾರ ಹಾಗೂ ಭಾರತ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಿದರೆ 1+1=2 ಆಗುವುದಿಲ್ಲ ಬದಲಾಗಿ, ‘1+1=11’ ಆಗಲಿದೆ. ಅಂದರೆ ಈಗಾಗಲೇ ಅಭಿವೃದ್ಧಿಗೊಂಡಿರುವ ಗುಜರಾತ್ ಇನ್ನೊಂದು ಎತ್ತರಕ್ಕೆ ತಲುಪಲಿದೆ’ ಎಂದು ಹೇಳಿದರು.

‘ನಾನು ಗುಜರಾತ್‌ನಲ್ಲಿ ಈ ಚುನಾವಣಾ ಪ್ರಚಾರದಲ್ಲಿ ಸಂಚರಿಸುವ ವೇಳೆ 40 ವರ್ಷದ ಸಾರ್ವಜನಿಕ ಜೀವನದಲ್ಲಿ ಸಿಕ್ಕ ಪ್ರೀತಿಗಿಂತ ಈಗ ಹೆಚ್ಚು ಪ್ರೀತಿ ಸಿಕ್ಕಿದೆ. ಇದು ನನಗೆ ಭಾರತವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಬಲ ನೀಡುತ್ತದೆ. ನಾನು ನನ್ನ ಜೀವನವನ್ನೇ ಗುಜರಾತ್ ಹಾಗೂ ಭಾರತಕ್ಕೆ ಮುಡಿಪಿಟ್ಟಿರುವೆ. ಜನರು ಡಿ.14ರಂದು ಭಾರಿ ಪ್ರಮಾಣದಲ್ಲಿ ಮತದಾನ ಮಾಡಬೇಕು’ ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.