' ಸ್ವಿಜರ್ಲ್ಯಾಂಡ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಿಎನ್‌ಬಿ ಹಗರಣ ಕಳಂಕಿತ ನೀರವ್ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೌದು,' ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.
ಪಾಟ್ನಾ:' ಸ್ವಿಜರ್ಲ್ಯಾಂಡ್ನಲ್ಲಿ ನಡೆದ ವಿಶ್ವ ಆರ್ಥಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಿಎನ್ಬಿ ಹಗರಣ ಕಳಂಕಿತ ನೀರವ್ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದು ಹೌದು,' ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ನೀರವ್ ಅವರೊಂದಿಗೆ ಪ್ರಧಾನಿ ವೇದಿಕೆ ಹಂಚಿಕೊಂಡಿಲ್ಲವೆಂದು, ಪ್ರಧಾನಿ ಕಚೇರಿ ಹೇಳಿದ್ದು, ಇದು ಸತ್ಯಕ್ಕೆ ದೂರವಾದದ್ದು ಎನ್ನುವ ಮೂಲಕ ಬಿಜೆಪಿಯ ಅಸಂತೃಪ್ತ ಸಂಸದ ಸಿನ್ಹಾ ಟ್ವೀಟ್ ಮೂಲಕ ಮಗದೊಮ್ಮೆ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸರಣಿ ಟ್ವೀಟ್ ಮಾಡಿದ ಸಿನ್ಹಾ, 'ಪಾಟ್ನಾ ವಿವಿಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳಲು, ಆ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಸಂಸದನಾದ ನನಗೇ ಅನುಮತಿ ನೀಡಿರಲಿಲ್ಲ. ಆದರೆ, ಕ್ರಿಮಿನಲ್ನೊಂದಿಗೆ ಮೋದಿ ವೇದಿಕೆ ಶೇರ್ ಮಾಡಿಕೊಂಡಿದ್ದಾರೆ,' ಎನ್ನುವ ಅರ್ಥದಲ್ಲಿ ಕುಹಕವಾಗಿ ಹೇಳಿದ್ದಾರೆ.
ದಾವೋಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರವ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ಸದಾ ಜಾಗೃತರಾಗಿರುವ ಪ್ರಧಾನಿ ಆಗ ನಿದ್ರಿಸುತ್ತಿದ್ದರೇ, ಎಂದು ಕೇಳಿದ್ದಾರೆ.
ಫೋಟೋ ಕ್ರೆಡಿಟ್: ಸೋಷಿಯಲ್ ಮೀಡಿಯಾ
