ಚುನಾವಣೆ ಹತ್ತಿರ ಬಂದಂತೆ ರೈತ ಸ್ನೇಹಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ 2.3 ಲಕ್ಷ ಕೋಟಿ ರು. ವಾರ್ಷಿಕ ‘ರೈತ ಪ್ಯಾಕೇಜ್’ ಘೋಷಿಸುವ ಸಾಧ್ಯತೆ ಇದೆ.
ನವದೆಹಲಿ (ಜ. 03): ಚುನಾವಣೆ ಹತ್ತಿರ ಬಂದಂತೆ ರೈತ ಸ್ನೇಹಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ 2.3 ಲಕ್ಷ ಕೋಟಿ ರು. ವಾರ್ಷಿಕ ‘ರೈತ ಪ್ಯಾಕೇಜ್’ ಘೋಷಿಸುವ ಸಾಧ್ಯತೆ ಇದೆ.
ಈ ಪ್ರಕಾರ ರೈತರಿಗೆ ಹೆಕ್ಟೇರ್‌ಗೆ (2.5 ಎಕರೆ) 50 ಸಾವಿರ ರು.ನಂತೆ ಗರಿಷ್ಠ 1 ಲಕ್ಷ ರು.ವರೆಗೆ ಶೂನ್ಯ ಬಡ್ಡಿಯ ಸಾಲ ದೊರಕಲಿದೆ. ಇನ್ನು ಪ್ರತಿ ಎಕರೆಗೆ (ಸೀಸನ್‌ಗೆ) 4 ಸಾವಿರ ರುಪಾಯಿ ಸಹಾಯಧನವನ್ನು ರೈತರ ಖಾತೆಗೆ ನೇರ ಜಮಾ ಮಾಡುವ ಯೋಜನೆಯೂ ಜಾರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ.
ಬಹುಶಃ ಮುಂದಿನ ವಾರ ಈ ಘೋಷಣೆಗಳು ಜಾರಿಗೆ ಬರುವ ಸಾಧ್ಯತೆಗಳು ಇವೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ಹೇಳಿದೆ.
ನೇರ ನಗದು ವರ್ಗಾವಣೆಯಿಂದ ಕೇಂದ್ರ ಸರ್ಕಾರಕ್ಕೆ 2.3 ಲಕ್ಷ ಕೋಟಿ ರು. ಹೊರೆ ಬೀಳಲಿದೆ. ಇನ್ನು 28ರಿಂದ 30 ಸಾವಿರ ಕೋಟಿ ರು.ನಷ್ಟುಶೂನ್ಯ ಬಡ್ಡಿ ಯೋಜನೆಯಿಂದ ಹೊರೆಯಾಗಲಿದೆ. ಒಟ್ಟಾರೆ ವಾರ್ಷಿಕ 2.3 ಲಕ್ಷ ಕೋಟಿ ರು.ನಷ್ಟುಹೊರೆ ಕೇಂದ್ರ ಸರ್ಕಾರದ ಮೇಲೆ ಬೀಳಲಿದೆ ಎನ್ನಲಾಗಿದೆ.
ಇನ್ನು ರಸಗೊಬ್ಬರ ಸಬ್ಸಿಡಿ ವರ್ಗಾವಣೆ ಹಾಗೂ ಕೆಲವು ಸಣ್ಣಪುಟ್ಟಯೋಜನೆಗಳು ಕೂಡ ಇದರಲ್ಲಿ ವಿಲೀನವಾಗುವ ಸಾಧ್ಯತೆ ಇದೆ.
ಇತ್ತೀಚಿನ 5 ರಾಜ್ಯಗಳ ಚುನಾವಣೆಯಲ್ಲಿ ಸೋಲಲು ರೈತ ಪರ ಯೋಜನೆಗಳ ಕೊರತೆ ಕಾರಣ ಎನ್ನಲಾಗುತ್ತಿದ್ದು, ಈ ಕಾರಣ 2019ರ ಲೋಕಸಭೆ ಚುನಾವಣೆಗೆ ಮುನ್ನ ತಪ್ಪು ತಿದ್ದಿಕೊಳ್ಳಲು ಬಿಜೆಪಿ ಮುಂದಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 3, 2019, 9:48 AM IST