ನವದೆಹಲಿ[ಆ: ಭ್ರಷ್ಟಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಮುಂದುವರೆಸಿರುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ಮತ್ತು ಕರ್ತವ್ಯಲೋಪ ಎಸಗಿದ 22 ತೆರಿಗೆ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಿದೆ.

ಆಮದು ತೆರಿಗೆ ಸಂಗ್ರಹಿಸುವ ಹಾಗೂ ಜಿಎಸ್‌ಟಿ ಮೇಲೆ ನಿಗಾ ವಹಿಸುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹಾಗೂ ಸೀಮಾಸುಂಕ(ಸಿಬಿಐಸಿ)ದ 22 ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗಿದೆ.

ಪ್ರಶಸ್ತಿ ಪಡೆದ ಮರುದಿನವೇ ಲಂಚ ಪಡೆದು ಜೈಲು ಸೇರಿದ!

ಈ ಪೈಕಿ ನಾಗ್ಪುರ ಹಾಗೂ ಭೋಪಾಲ್‌ನ 11, ಬೆಂಗಳೂರು, ಜೈಪುರ, ಚೆನ್ನೈ, ದೆಹಲಿ, ಕೋಲ್ಕತಾ, ಮೇರಠ್‌ ಹಾಗೂ ಚಂಡೀಗಢ ವಿಭಾಗದ ತಲಾ ಓರ್ವ ತೆರಿಗೆ ಅಧಿಕಾರಿಗಳನ್ನು ಅಧಿಕಾರದಿಂದ ಕಿತ್ತೆಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.